ಕರ್ನಾಟಕ

karnataka

ETV Bharat / bharat

ಅಗ್ನಿವೀರರಿಗೆ ಸರ್ಕಾರಿ ಉದ್ಯೋಗ 'ಖಾತ್ರಿ': ಹರಿಯಾಣ ಸಿಎಂ ಬಂಪರ್ ಆಫರ್​ - ಹರಿಯಾಣ ಸಿಎಂ ಮನೋಹರ್​ಲಾಲ್​ ಖಟ್ಟರ್​

ಹರಿಯಾಣಕ್ಕೆ ಸೇರಿದ ಅಗ್ನಿವೀರರು ತಮ್ಮ 4 ವರ್ಷಗಳ ಸೇವೆಯ ನಂತರ ಅವರನ್ನು ರಾಜ್ಯ ಸರ್ಕಾರದ ಗ್ರೂಪ್-ಸಿ ಉದ್ಯೋಗಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಮನೋಹರ್​ ಲಾಲ್​ ಘೋಷಿಸಿದರು.

ಅಗ್ನಿವೀರರಿಗೆ ಸರ್ಕಾರಿ ಉದ್ಯೋಗ 'ಖಾತ್ರಿ': ಹರಿಯಾಣ ಸಿಎಂ ಬಂಪರ್ ಆಫರ್​
ಅಗ್ನಿವೀರರಿಗೆ ಸರ್ಕಾರಿ ಉದ್ಯೋಗ 'ಖಾತ್ರಿ': ಹರಿಯಾಣ ಸಿಎಂ ಬಂಪರ್ ಆಫರ್​

By

Published : Jun 21, 2022, 8:24 PM IST

ಭಿವಾನಿ (ಹರಿಯಾಣ):ರಕ್ಷಣಾ ಇಲಾಖೆಯ ಮಹತ್ವಾಕಾಂಕ್ಷಿ ಅಗ್ನಿಪಥ ಯೋಜನೆಯ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. ನಾಲ್ಕು ವರ್ಷಗಳ ಸೇವೆಯ ನಂತರ ಭವಿಷ್ಯದ ಬಗ್ಗೆ ಯುವಕರು ಆತಂಕಕ್ಕೀಡಾಗಿದ್ದು, ಈಗಾಗಲೇ ವಿವಿಧ ಕಾರ್ಪೋರೇಟ್​ ಕಂಪನಿಗಳು ಉದ್ಯೋಗ ನೀಡಲು ತಾವು ಸಿದ್ಧ ಎಂದು ಮುಂದೆ ಬಂದಿವೆ. ಇದೀಗ ಹರಿಯಾಣ ಸರ್ಕಾರ ಕೂಡ ಅಗ್ನಿವೀರರನ್ನು ಗ್ರೂಪ್​ ಸಿ ಹುದ್ದೆಗಳಿಗೆ ಭರ್ತಿ ಮಾಡಲಾಗುವುದು ಎಂದು ಘೋಷಿಸಿದೆ.

ಸೇನೆಯಲ್ಲಿ ಅಗ್ನಿವೀರರಾಗಿ ಸೇವೆ ಸಲ್ಲಿಸಿದ ಹರಿಯಾಣದ ಯುವಕರಿಗೆ ಸರ್ಕಾರದ ಗ್ರೂಪ್​ ಸಿ ಹುದ್ದೆ ನೀಡುವ ಖಾತರಿಯನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್​ ನೀಡಿದ್ದಾರೆ.

8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಹರಿಯಾಣದ ಅಗ್ನಿವೀರರನ್ನು ರಾಜ್ಯ ಸರ್ಕಾರದ ಗ್ರೂಪ್-ಸಿ ಹುದ್ದೆಗಳಿಗೆ ಭರ್ತಿ ಮಾಡಲಾಗುವುದು. ಸೇನೆಯಲ್ಲಿ ಉತ್ತಮ ತರಬೇತಿ ಪಡೆದವರಿಗೆ ಪೊಲೀಸ್​ ಇಲಾಖೆಯಲ್ಲೂ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಮನೋಹರ್​ ಲಾಲ್​ ಈ ಕುರಿತು ಟ್ವೀಟ್​​ ಮಾಡಿದ್ದು, 'ನೀವು ದೇಶದ ಬಗ್ಗೆ ಗಮನಹರಿಸಿ, ನಿಮ್ಮ ಬಗ್ಗೆ ನಾವು ಕಾಳಜಿ ವಹಿಸಲಿದ್ದೇವೆ. ದೇಶ ಸೇವೆ ಮಾಡಿ ಬಂದ ಅಗ್ನಿವೀರರಿಗೆ ಸರ್ಕಾರಿ ಉದ್ಯೋಗ ಪಕ್ಕಾ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಅಗ್ನಿಪಥ ಪ್ರತಿಭಟನಾಕಾರರಿಗೆ ಶಾಕ್ - ಭರಿಸಬೇಕಿದೆ ಆಸ್ತಿ ಹಾನಿ ನಷ್ಟ

ABOUT THE AUTHOR

...view details