ಅಂಬಾಲಾ(ಹರಿಯಾಣ): ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕರೊಬ್ಬರು ಭಾರತವನ್ನ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ನಿನ್ನೆ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಏಕರೂಪ ನಾಗರಿಕ ಸಂಹಿತೆಯ ಸೆಮಿನಾರ್‌ನಲ್ಲಿ ಭಾಗವಹಿಸಿದ್ದ ಶಾಸಕ ಅಸೀಮ್ ಗೋಯೆಲ್ ಇತರರೊಂದಿಗೆ ಸೇರಿಕೊಂಡು ಈ ರೀತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
'ಭಾರತವನ್ನ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಮತ್ತು ಅದಕ್ಕಾಗಿ ಯಾವುದೇ ರೀತಿಯ ತ್ಯಾಗ ಮಾಡಲು ತಾವು ಸಿದ್ಧ ಇರುವುದಾಗಿ ಪ್ರತಿಜ್ಞೆ' ಮಾಡಿದ್ದಾರೆ. ಭಾರತವನ್ನ ಹಿಂದೂ ರಾಷ್ಟ್ರ ಎಂದು ನಾವು ಘೋಷಿಸುತ್ತೇವೆ. ಈ ಗುರಿ ಸಾಧಿಸಲು ನಮ್ಮ ಪೂರ್ವಜರು ಮತ್ತು ದೇವತೆಗಳು ನಮಗೆ ಶಕ್ತಿ ನೀಡಲಿ ಎಂದು ಶಾಸಕರು ಹೇಳಿದ್ದಾರೆ. ಈ ವೇಳೆ, ಹಿಂದೂ ರಾಷ್ಟ್ರದ ಪರವಾಗಿ ಘೋಷಣೆ ಸಹ ಮೊಳಗಿವೆ. ಇದಕ್ಕೆ ಇತರೆ ಶಾಸಕರು ಸಹ ಬೆಂಬಲ ಸೂಚಿಸಿದ್ದಾರೆ.