ಕರ್ನಾಟಕ

karnataka

ETV Bharat / bharat

ದೀಪಾವಳಿಯಂದು ಹರಿಯಾಣದಲ್ಲಿ ಪಟಾಕಿ ಸುಡಲು ಎರಡು ಗಂಟೆಗಳ ಕಾಲ ಮಾತ್ರ ಅವಕಾಶ - Haryana allows firecrackers for two hours on Diwali

ದೀಪಾವಳಿಯಂದು ಕೇವಲ ಎರಡು ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಲು ಜನರಿಗೆ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.

Haryana allows firecrackers for two hours on Diwali
ಹರಿಯಾಣದಲ್ಲಿ ಪಟಾಕಿ ಸುಡಲು ಎರಡು ಗಂಟೆಗಳ ಕಾಲ ಮಾತ್ರ ಅವಕಾಶ

By

Published : Nov 9, 2020, 12:37 PM IST

ಚಂಡೀಗಢ (ಹರಿಯಾಣ): ಹರಿಯಾಣ ಸರ್ಕಾರ ದೀಪಾವಳಿಯಂದು ಪಟಾಕಿ ಸುಡಲು ಎರಡು ಗಂಟೆಗಳ ಕಾಲ ಮಾತ್ರ ಅವಕಾಶ ನೀಡಿದೆ.

ವಾಯುಮಾಲಿನ್ಯ ಕಡಿಮೆ ಮಾಡಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಮತ್ತು ಮಾಲಿನ್ಯ ತಡೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಓದಿ:ದೀಪಾವಳಿ ‘ಪಟಾಕಿ’ ಠುಸ್​: ದೇಶಾದ್ಯಂತ ಪಟಾಕಿ ನಿಷೇಧಿಸಿ ಹಸಿರು ನ್ಯಾಯಮಂಡಳಿ ಆದೇಶ

ಪಟಾಕಿ ಸಿಡಿಯುವುದರಿಂದ ಉಂಟಾಗುವ ಮಾಲಿನ್ಯದಿಂದಾಗಿ ಕೊರೊನಾ ಸೋಂಕಿತರಿಗೆ ತೊಂದರೆಯಾಗುವ ಹಿನ್ನೆಲೆ ರಾಜ್ಯದಲ್ಲಿ ಪಟಾಕಿ ಮಾರಾಟವನ್ನು ಸಂಪೂರ್ಣ ನಿಷೇಧಿಸಲು ನಿರ್ಧರಿಸಿದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ತಿಳಿಸಿತ್ತು.

ದೀಪಾವಳಿಯಂದು ಕೇವಲ ಎರಡು ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಲು ಜನರಿಗೆ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಭಾನುವಾರ ಫತೇಹಾಬಾದ್‌ನಲ್ಲಿ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details