ಕರ್ನಾಟಕ

karnataka

ETV Bharat / bharat

ಕೊರೊನಾ, ಬ್ಲ್ಯಾಕ್​ ಫಂಗಸ್​​ ಮಧ್ಯೆ ಕುದುರೆಗಳಲ್ಲಿ ಅಪಾಯಕಾರಿ ಸೋಂಕು; ಗುಣಪಡಿಸಲು ಅಸಾಧ್ಯ

ಹರಿಯಾಣದ ಜಜ್ಜರ್​ನಲ್ಲಿ ಎರಡು ಕುದುರೆಗಳಲ್ಲಿ ಗುಣಪಡಿಸಲಾಗದ ರೋಗವೊಂದು ಪತ್ತೆಯಾಗಿದ್ದು, ಹೀಗಾಗಿ ಅವುಗಳಿಗೆ ದಯಾಮರಣ ನೀಡಲಾಗಿದೆ.

2 horses tested positive
2 horses tested positive

By

Published : May 26, 2021, 4:54 AM IST

Updated : May 26, 2021, 5:57 AM IST

ಜಜ್ಜರ್​(ಹರಿಯಾಣ):ಮಹಾಮಾರಿ ಕೊರೊನಾ ವೈರಸ್​ ಎರಡನೇ ಅಲೆ ಮಧ್ಯೆ ದೇಶದ ಜನರು ಬ್ಲ್ಯಾಕ್​ ಫಂಗಸ್​​ನಿಂದ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಹರಿಯಾಣದಲ್ಲಿ ಮತ್ತೊಂದು ಡೇಂಜರಸ್​ ವೈರಸ್​ ಕಾಣಿಸಿಕೊಂಡಿದೆ.

ಹರಿಯಾಣದ ಜಜ್ಜರ್​​ ಜಿಲ್ಲೆಯ ಎರಡು ಕುದುರೆಗಳಲ್ಲಿ ಈ ಡೆಡ್ಲಿ ವೈರಸ್​​ 'ಗ್ಲಾಂಡರ್ಸ್​​' ದೃಢಪಟ್ಟಿದೆ. ಗ್ರಂಥಿಗಳಲ್ಲಿ ಕಂಡು ಬರುವ ಈ ಸೋಂಕು ಗುಣಪಡಿಸಲಾಗದ ರೋಗ ಎನ್ನಲಾಗಿದೆ.

ಇದನ್ನೂ ಓದಿ: ವರ್ಕೌಟ್​ನಲ್ಲಿ ಫುಲ್​ ಬ್ಯುಸಿಯಾದ ಕೆಎಲ್​... ಕಮೆಂಟ್ ಮಾಡಿದ ಆತಿಯಾ ಶೆಟ್ಟಿ!

ಪ್ರಾಣಿಗಳಿಂದ ಮನುಷ್ಯರಿಗೂ ಹರಡುವ ಸಾಧ್ಯತೆ ದಟ್ಟವಾಗಿದ್ದು, ಈಗಾಗಲೇ ಸೋಂಕಿಗೊಳಗಾಗಿರುವ ಕುದುರೆಗಳಿಗೆ ದಯಾಮರಣ ನೀಡಲಾಗಿದೆ ಎಂದು ಪಂಶುಸಂಗೋಪನೆ ಉಪನಿರ್ದೇಶಕ ಡಾ. ಮನೀಶ್ ದಬಾಸ್​ ತಿಳಿಸಿದ್ದಾರೆ. ಇದರ ಜತೆಗೆ 143 ಕುದುರೆಗಳ ರಕ್ತದ ಮಾದರಿ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದಿದ್ದಾರೆ.

Last Updated : May 26, 2021, 5:57 AM IST

ABOUT THE AUTHOR

...view details