ಕರ್ನಾಟಕ

karnataka

ETV Bharat / bharat

Uttarakhand Result:  ಭಾರಿ ಮತಗಳ ಅಂತರದಿಂದ ಸೋಲು ಕಂಡ ಮಾಜಿ ಸಿಎಂ ಹರೀಶ್ ರಾವತ್ - ಉತ್ತರಾಖಂಡ ಮಾಜಿ ಸಿಎಂಗೆ ಸೋಲು

ಲಾಲ್ಕುವಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮೋಹನ್ ಸಿಂಗ್ ಬಿಶ್ತ್ ವಿರುದ್ಧ ಉತ್ತರಾಖಂಡ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕರಾದ ಹರೀಶ್ ರಾವತ್ ಅವರು ಸೋಲು ಅನುಭವಿಸಿದ್ದಾರೆ.

Harish Rawat lost the election from Lalkuan seat
Uttarakhand Result: ಮಾಜಿ ಸಿಎಂ ಹರೀಶ್ ರಾವತ್ ಭಾರಿ ಮತಗಳ ಅಂತರದಿಂದ ಸೋಲು

By

Published : Mar 10, 2022, 1:56 PM IST

ಡೆಹ್ರಾಡೂನ್(ಉತ್ತರಾಖಂಡ): ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕರಾದ ಹರೀಶ್ ರಾವತ್ ಅವರು ಲಾಲ್ಕುವಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮೋಹನ್ ಸಿಂಗ್ ಬಿಶ್ತ್ ವಿರುದ್ಧ ಪರಾಭವಗೊಂಡಿದ್ದಾರೆ. ರಾವತ್ ಅವರು ಸುಮಾರು14,000 ಮತಗಳ ಅಂತರದಿಂದ ಪರಾಜಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಫೆಬ್ರವರಿ 14ರಂದು ಮತದಾನ ಪ್ರಕ್ರಿಯೆ ಮುಗಿದ ನಂತರ ಹರೀಶ್ ರಾವತ್ ಅವರು ತಮ್ಮನ್ನು ತಾವು ಸಿಎಂ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದರು. 2017ರ ವಿಧಾನಸಭಾ ಚುನಾವಣೆಯಲ್ಲಿ ಕಿಚ್ಚಾ ವಿಧಾನಸಭಾ ಕ್ಷೇತ್ರ ಮತ್ತು ಹರಿದ್ವಾರ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ಎರಡೂ ಕ್ಷೇತ್ರಗಳಲ್ಲೂ ಸೋಲನ್ನು ಅನುಭವಿಸಿದ್ದರು.

ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ರಾವತ್ ಅವರಿಗೆ ಮೊದಲು ನೈನಿತಾಲ್ ಜಿಲ್ಲೆಯ ರಾಮನಗರ್​ ವಿಧಾನಸಭಾ ಸ್ಥಾನವನ್ನು ನೀಡಲಾಗಿತ್ತು. ನಂತರ ಅವರಿಗೆ ಲಾಲ್ಕುವಾದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಈಗಿನ ಟ್ರೆಂಡ್​ನಂತೆ, ಬಿಜೆಪಿ 43, ಕಾಂಗ್ರೆಸ್ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಇದನ್ನೂ ಓದಿ:Punjab Result: ಆಪ್ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಗೆಲುವು

ABOUT THE AUTHOR

...view details