ಕರ್ನಾಟಕ

karnataka

ETV Bharat / bharat

ಪುಣ್ಯ ಕ್ಷೇತ್ರಗಳಲ್ಲಿ ಯುವತಿಯರ ರೀಲ್​​​.. ಪುರೋಹಿತ್, ಬ್ರಾಹ್ಮಣ ಸಭಾದಿಂದ ಆಕ್ಷೇಪ

ಉತ್ತರಾಖಂಡದ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಯುವತಿಯರು ರೀಲ್ ಮಾಡಿರುವ ಕೆಲವೊಂದು ವಿಡಿಯೋ ವೈರಲ್​ ಆಗಿರುವ ಬೆನ್ನಲ್ಲೇ ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Haridwar priests object to Girls Instagram reels
Haridwar priests object to Girls Instagram reels

By

Published : Jun 7, 2022, 2:43 PM IST

ಹರಿದ್ವಾರ(ಉತ್ತರಾಖಂಡ):ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ ಮಾಡುವ ಕ್ರೇಜ್​ ಹೆಚ್ಚಾಗ್ತಿದ್ದು, ಯುವಕ ಯುವತಿಯರು ಲೈಕ್ಸ್​, ಕಾಮೆಂಟ್​​​ಗೋಸ್ಕರ ವಿಭಿನ್ನ ರೀತಿಯ ರೀಲ್​ ತಯಾರಿಸ್ತಿದ್ದಾರೆ. ಈ ಭರದಲ್ಲಿ ಪರಿಸರ, ಸ್ಥಳಗಳ ಇತಿ ಮೀತಿ ಸಂಪೂರ್ಣವಾಗಿ ಮರೆತು ಬಿಡುತ್ತಿದ್ದಾರೆ. ಸದ್ಯ ಉತ್ತರಾಖಂಡದ ವಿವಿಧ ಪುಣ್ಯ ಕ್ಷೇತ್ರಗಳಲ್ಲೂ ರೀಲ್ ಮಾಡಲಾಗಿದ್ದು, ಅದಕ್ಕೆ ಸಿಕ್ಕಾಪಟ್ಟೆ ಆಕ್ಷೇಪ ವ್ಯಕ್ತವಾಗಿದೆ.

ಪುಣ್ಯ ಕ್ಷೇತ್ರಗಳಲ್ಲಿ ಯುವತಿಯರ ರೀಲ್

ಹರಿದ್ವಾರದ ಪುಣ್ಯ ಕ್ಷೇತ್ರ ಹರ್ಕಿ ಪೈಡಿ ಎಂಬಲ್ಲಿ ರೀಲ್ ಮಾಡಲಾಗಿದ್ದು, ಅದಕ್ಕೆ ಪುರೋಹಿತ್​ ಮತ್ತು ಬ್ರಾಹ್ಮಣ ಸಭಾ ಆಕ್ಷೇಪ ವ್ಯಕ್ತಪಡಿಸಿದೆ. ಸಾವಿರಾರು ಯಾತ್ರಾರ್ಥಿಗಳು ಗಂಗಾನದಿಯಲ್ಲಿ ಸ್ನಾನ ಮಾಡಲು ಹರಿದ್ವಾರಕ್ಕೆ ಬರುತ್ತಾರೆ. ಇಂತಹ ಸ್ಥಳಗಳಲ್ಲಿ ಫೋಟೋ ಅಥವಾ ವಿಡಿಯೋ ಸೆರೆ ಹಿಡಿಯುವುದು ಸರ್ವೆ ಸಾಮಾನ್ಯ. ಆದರೆ, ಸ್ಥಳದ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ರೀಲ್ಸ್ ಮಾಡಿ, ಅವುಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ಆಟೋ ಓಡಿಸುತ್ತಲೇ ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಕುಮ್ಮಕ್ಕು..​ ಹಿಜ್ಬುಲ್​ ಉಗ್ರನ 'ಸ್ಫೋಟಕ' ಮಾಹಿತಿ ಬಹಿರಂಗ​

ಹರಿದ್ವಾರದ ತೀರ್ಥ ಪುರೋಹಿತ್ ಸಮಾಜದ ಉಜ್ವಲ್ ಪಂಡಿತ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಈ ರೀತಿಯಾಗಿ ರೀಲ್ ಮಾಡುವುದು ಸರಿಯಲ್ಲ. ಆ ಪ್ರದೇಶದ ಮಿತಿ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.

ABOUT THE AUTHOR

...view details