ಕರ್ನಾಟಕ

karnataka

ETV Bharat / bharat

'ಹರ್ ಘರ್ ತಿರಂಗ' ಹಾಡು ನೋಡಿ: ದೇಶಭಕ್ತಿ ಉಕ್ಕಿಸುವ ಹಾಡಿಗೆ ತಾರೆಗಳ ದನಿ - ಈಟಿವಿ ಭಾರತ ಕನ್ನಡ

ದೇಶಭಕ್ತಿ ಉಕ್ಕಿಸುವ 'ಹರ್ ಘರ್ ತಿರಂಗ' ಹಾಡು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. 4 ನಿಮಿಷ 22 ಸೆಕೆಂಡುಗಳ ಅವಧಿಯ ಈ ಹಾಡಿನಲ್ಲಿ ಸಿನಿಮಾ​, ಕ್ರೀಡಾ ಕ್ಷೇತ್ರದ ತಾರೆಯರು ಕಾಣಿಸಿಕೊಂಡಿದ್ದಾರೆ.

ಹರ್ ಘರ್ ತಿರಂಗಾ ಹಾಡು
HARI GHAR TIRANGA VIDEO SONG RELEASED BY CENTRAL GOVERNMENT

By

Published : Aug 4, 2022, 6:19 PM IST

Updated : Aug 6, 2022, 12:43 PM IST

75ನೇ ವರ್ಷದ ಸ್ವಾತಂತ್ರೋತ್ಸವದ ಶುಭ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸಂಸ್ಕೃತಿ ಸಚಿವಾಲಯವು ಬುಧವಾರ ‘ಹರ್ ಘರ್ ತಿರಂಗ’ ಹಾಡು ಬಿಡುಗಡೆ ಮಾಡಿದೆ. ದೇಶಭಕ್ತಿ ಉಕ್ಕಿಸುವ ಹಾಡನ್ನು ಪ್ರಧಾನವಾಗಿ ಜನಪ್ರಿಯ ಹಿನ್ನೆಲೆ ಗಾಯಕರಾದ ಸೋನು ನಿಗಮ್ ಹಾಗೂ ಆಶಾ ಭೋಂಸ್ಲೆ ಹಾಡಿದ್ದಾರೆ. ಗೀತೆಯಲ್ಲಿ ಬಾಲಿವುಡ್​ ಹಿರಿಯ ನಟ ಅಮಿತಾಭ್ ಬಚ್ಚನ್‌ ಅವರಿಂದ ಹಿಡಿದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ವರೆಗೆ ಅನೇಕರು ಕಾಣಿಸಿಕೊಂಡಿದ್ದಾರೆ.

'ಆಜಾದಿ ಕಾ ಅಮೃತ್ ಮಹೋತ್ಸವ' ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ ದೇಶದ ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ (ಹರ್ ಘರ್ ತಿರಂಗ) ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗ’ ಎಂಬ ದೇಶಭಕ್ತಿ ಗೀತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಿದೆ.

ನಟರಾದ ಪ್ರಭಾಸ್, ಕೀರ್ತಿ ಸುರೇಶ್ ಮತ್ತು ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸೇರಿದಂತೆ ಹಲವು ತಾರೆಯರು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಷ್ಟೇ ಅಲ್ಲದೇ ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟರಾದ ಅಮಿತಾಬ್ ಬಚ್ಚನ್, ಅಕ್ಷಯ್​ ಕುಮಾರ್​, ಅಜಯ್​ ದೇವಗನ್​, ಕ್ರೀಡಾ ದಿಗ್ಗಜ ಕಪಿಲ್ ದೇವ್ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ದೇಶಭಕ್ತಿ ಗೀತೆಗೆ ದನಿಯಾಗಿದ್ದಾರೆ.

ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಭಾಷೆ, ವಿಭಿನ್ನ ಸಂಪ್ರದಾಯ ಮತ್ತು ಆಚರಣೆ, ಪ್ರಾಚೀನ ಪರಂಪರೆಯನ್ನು ಹಾಡಿನಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಡಿನುದ್ದಕ್ಕೂ ನೋಡಬಹುದು. ಕನ್ನಡಿಗ, ಕ್ರಿಕೆಟ್​ ಪಟು ಕೆ.ಎಲ್.ರಾಹುಲ್​ ಅವರು ಮನೆ ಮನೆಗೂ ತ್ರಿವರ್ಣ ಎಂದು ಹಾಡಿನಲ್ಲಿ ದನಿಗೂಡಿಸಿದ್ದನ್ನೂ ಸಹ ವಿಡಿಯೋದಲ್ಲಿ ನೋಡುವಿರಿ.

Last Updated : Aug 6, 2022, 12:43 PM IST

ABOUT THE AUTHOR

...view details