ವ್ಯಾಪಕವಾಗಿ ಹರಡಿದ ಕೋವಿಡ್-19 ಸೋಂಕು ತಡೆಯಲು ಲಾಕ್ಡೌನ್ ಜಾರಿ ಮಾಡಲಾಯ್ತು. ನಿಗದಿತ ವೇಳೆಯಲ್ಲೇ ವ್ಯಾಪಾರ-ವಹಿವಾಟು ನಡೆಸಿ ಎಂದು ಸರ್ಕಾರ ನಿಯಮ ರೂಪಿಸಿತು. ಆದ್ರೆ, ಬೆಳಗ್ಗೆ ನಿಗದಿಪಡಿಸಿರುವ ವೇಳೆಯಲ್ಲಿ ಉತ್ತಮವಾಗಿ ತರಕಾರಿ ಮಾರಾಟವಾಗುತ್ತಿಲ್ಲ ಅನ್ನೋ ಕೊರಗು ರೈತರದ್ದಾಗಿದೆ.
ಕೋವಿಡ್, ಲಾಕ್ಡೌನ್, ದರ ಕುಸಿತ : ತರಕಾರಿ ಬೆಳೆದ ರೈತರ ಪರದಾಟ - formers
ಪಾರ್ಸೆಲ್ಗೆ ಮಾತ್ರ ಅವಕಾಶವಿರೋದ್ರಿಂದ ಹೆಚ್ಚಿನ ಹೋಟೆಲ್ಗಳು ಸ್ಥಗಿತಗೊಂಡಿವೆ. ಫಾಸ್ಟ್ ಫುಡ್ ಸೆಂಟರ್ಸ್, ಮಾಲ್ ಎಲ್ಲವೂ ಬಂದ್ ಆಗಿವೆ. ಇವೆಲ್ಲದರ ಪರಿಣಾಮ ತರಕಾರಿಗೆ ಬೇಡಿಕೆ ಕಡಿಮೆಯಾಗಿ ದರ ಕುಸಿತವಾಗಿದೆ..
ಈ ಅವಧಿಯಲ್ಲಿ ತರಕಾರಿ ಕೊಳ್ಳುವವರ ಸಂಖ್ಯೆ ಕಡಿಮೆ. ಕೊಂಡರೂ ಕೂಡ ಚೌಕಾಸಿ ಮಾಡಿ ಅತಿ ಕಡಿಮೆ ಬೆಲೆಗೆ ಕೊಳ್ಳುತ್ತಾರೆ. ಹೀಗಾಗಿ, ವ್ಯಾಪಾರವಿಲ್ಲ ಅಂತ ಹೇಳಿ ವ್ಯಾಪಾರಸ್ಥರು ಸಹ ರೈತರಿಂದ ಕಡಿಮೆ ಬೆಲೆಗೆ ತರಕಾರಿ ಖರೀದಿಸುತ್ತಾರೆ. ಇದ್ರಿಂದ ರೈತರು ಬಹಳ ನಷ್ಟ ಅನುಭವಿಸುತ್ತಿದ್ದಾರೆ.
ಲಾಕ್ಡೌನ್ನಿಂದ ಮದುವೆ, ನಿಶ್ಚಿತಾರ್ಥ ಸೇರಿ ಹಲವು ಕಾರ್ಯಕ್ರಮಗಳು ಮನೆಯಲ್ಲೇ ನಡೆಯುತ್ತಿವೆ. ಪಾರ್ಸೆಲ್ಗೆ ಮಾತ್ರ ಅವಕಾಶವಿರೋದ್ರಿಂದ ಹೆಚ್ಚಿನ ಹೋಟೆಲ್ಗಳು ಸ್ಥಗಿತಗೊಂಡಿವೆ. ಫಾಸ್ಟ್ ಫುಡ್ ಸೆಂಟರ್ಸ್, ಮಾಲ್ ಎಲ್ಲವೂ ಬಂದ್ ಆಗಿವೆ. ಇವೆಲ್ಲದರ ಪರಿಣಾಮ ತರಕಾರಿಗೆ ಬೇಡಿಕೆ ಕಡಿಮೆಯಾಗಿ ದರ ಕುಸಿತವಾಗಿದೆ.