ಕರ್ನಾಟಕ

karnataka

ETV Bharat / bharat

ಪ್ರೀತಿ ಮಾಡಿದ್ದೇ ತಪ್ಪಾಯ್ತು: ಮಗಳ ಕೊಲೆ ಮಾಡಿ, ರುಂಡದೊಂದಿಗೆ ಠಾಣೆಗೆ ಬಂದ ತಂದೆ! - ರುಂಡದೊಂದಿಗೆ ಠಾಣೆಗೆ ಬಂದ ತಂದೆ

ಮಗಳ ಶಿರಚ್ಛೇದ ಮಾಡಿರುವ ಪಾಪಿ ತಂದೆ ಅದನ್ನ ಕೈಯಲ್ಲಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ಆಗಮಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

father murdered his daughter
father murdered his daughter

By

Published : Mar 3, 2021, 10:15 PM IST

Updated : Mar 4, 2021, 11:24 AM IST

ಹರ್ದೋಯಿ (ಉತ್ತರ ಪ್ರದೇಶ): ಪ್ರೀತಿಯಲ್ಲಿ ಬಿದ್ದ ಮಗಳ ಕೊಲೆ ಮಾಡಿರುವ ಪಾಪಿ ತಂದೆ, ಆಕೆಯ ರುಂಡ ಕೈಯಲ್ಲಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.

17 ವರ್ಷದ ಮಗಳು ಸೋದರಸಂಬಂಧಿ ಆದೇಶ ಎಂಬ ಯುವಕನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಇಬ್ಬರ ಕೊಲೆ ಮಾಡಲು ಪಾಪಿ ತಂದೆ ಯೋಜನೆ ರೂಪಿಸಿದ್ದಾನೆ.

ಇದನ್ನೂ ಓದಿ: ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಶಶಿಕಲಾ ನಟರಾಜನ್​

ಮಗಳು ಮನೆಯಲ್ಲಿ ಒಬ್ಬಂಟಿಯಾಗಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಬಾಗಿಲು ಮುಚ್ಚಿ ಆಕೆಯ ಶಿರಚ್ಛೇದ ಮಾಡಿದ್ದಾನೆ. ಇದಾದ ಬಳಿಕ ಕೈಯಲ್ಲಿ ಆಕೆಯ ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬರಲು ಮುಂದಾಗಿದ್ದಾನೆ. ಘಟನೆಯಿಂದ ಭಯಭೀತರಾದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗಳ ಕತ್ತರಿಸಿದ ತಲೆ ಹಿಡಿದು ಬರುತ್ತಿದ್ದ ಆತನ ಬಂಧನ ಮಾಡಿದ್ದಾರೆ. ಉತ್ತರ ಪ್ರದೇಶದ ಹರ್ದೋಯಿ ಪಾಂಡೆ ತಾರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈಗಾಗಲೇ ಪಾಪಿ ತಂದೆಯ ಬಂಧನ ಮಾಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Last Updated : Mar 4, 2021, 11:24 AM IST

ABOUT THE AUTHOR

...view details