ಉನ್ನಾವೋ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಪಡೆದುಕೊಂಡಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಅವರನ್ನು ಮತದಾರ ಕೈ ಹಿಡಿಯಲಿಲ್ಲ. 10ನೇ ಸುತ್ತಿನ ಮತಎಣಿಕೆ ವೇಳೆಯಲ್ಲೂ ಕೇವಲ 438 ಮತ ಪಡೆದುಕೊಂಡಿರುವ ಅವರು ಹಿನ್ನಡೆ ಅನುಭವಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಪಂಕಜ್ ಗುಪ್ತಾ ಎದುರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದುಕೊಂಡಿದ್ದ ಆಶಾ ಸಿಂಗ್ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ಇವರು ಕಣದಲ್ಲಿದ್ದ ಕಾರಣ ಸಮಾಜವಾದಿ ಪಕ್ಷ ಈ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವುದಿಲ್ಲ ಎಂದು ಅಖಿಲೇಶ್ ಯಾದವ್ ತಿಳಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಅಭಿನವ್ ಕುಮಾರ್ಗೆ ಪಕ್ಷ ಟಿಕೆಟ್ ನೀಡಿತ್ತು. ಸದ್ಯ ಬಿಜೆಪಿಯ ಪಂಕಜ್ ಗುಪ್ತಾ 42,021 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದು, ಸಮಾಜವಾದಿ ಪಕ್ಷದ ಅಭಿನವ್ ಕುಮಾರ್ 30,612 ಮತ ಪಡೆದುಕೊಂಡು ಹಿನ್ನಡೆಯಲ್ಲಿದ್ದಾರೆ. ಆದರೆ, ಆಶಾ ಸಿಂಗ್ ಅತಿ ಕಡಿಮೆ ಮತಗಳನ್ನು ಪಡೆದು ಸೋಲು ಕಾಣುವಂತಾಗಿದೆ.