ಕರ್ನಾಟಕ

karnataka

ETV Bharat / bharat

ಹಾರ್ದಿಕ್ ಪಟೇಲ್ ಬಿಜೆಪಿ ಸೇರ್ಪಡೆ ಖಚಿತ - ಹಾರ್ದಿಕ್ ಪಟೇಲ್ ಬಿಜೆಪಿ ಸೇರ್ಪಡೆ ಖಚಿತ

ಕಾಂಗ್ರೆಸ್​​ಗೆ ರಾಜೀನಾಮೆ ನೀಡಿದ ಬಳಿಕ ಹಾರ್ದಿಕ್ ಪಟೇಲ್ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇದ್ದವು. ಈ ಹಿಂದೆ ಮೇ 30 ಅಥವಾ ಮೇ 31ರಂದು ಬಿಜೆಪಿಗೆ ಸೇರುತ್ತಾರೆ ಎನ್ನಲಾಗಿತ್ತು..

hardik-patel-to-switch-over-his-loyalties-to-bjp-by-june-2
ಹಾರ್ದಿಕ್ ಪಟೇಲ್ ಬಿಜೆಪಿ ಸೇರ್ಪಡೆ ಖಚಿತ

By

Published : May 31, 2022, 12:21 PM IST

ಗಾಂಧಿನಗರ(ಗುಜರಾತ್) :ಇತ್ತೀಚಿಗೆ ಕಾಂಗ್ರೆಸ್​​ನಿಂದ ಹೊರ ಬಂದಿರುವ ಗುಜರಾತ್​ನ ಯುವ ಹೋರಾಟಗಾರ, ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ಸಂಚಾಲಕ ಹಾರ್ದಿಕ್ ಪಟೇಲ್ ಬಿಜೆಪಿ ಸೇರುವುದು ಖಚಿತವಾಗಿದೆ. ಜೂನ್​ 2ರಂದು ಕಮಲ ಪಕ್ಷಕ್ಕೆ ಸೇರುವುದಾಗಿ ಖುದ್ದು ಹಾರ್ದಿಕ್​ ಪಟೇಲ್​ ಮಾಹಿತಿ ನೀಡಿದ್ದಾರೆ.

ಗುಜರಾತ್​​ ಕಾಂಗ್ರೆಸ್​ನ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ್ ಪಟೇಲ್ ಮೇ 18ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳು ಎದ್ದಿದ್ದವು.

ಮುಂದಿನ ವರ್ಷ ಗುಜರಾತ್​​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲ್ಲಿದೆ. ಯುವ ನಾಯಕ ಆಡಳಿತಾರೂಢ ಪಕ್ಷದ ಸೇರ್ಪಡೆಯಿಂದ ಚುನಾವಣೆಯ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಯೂ ಇದೆ.

ಇದನ್ನೂ ಓದಿ:ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಹಾರ್ದಿಕ್ ಪಟೇಲ್ ಬಿಜೆಪಿ ಸೇರ್ಪಡೆ!?

ABOUT THE AUTHOR

...view details