ಅಹಮದಾಬಾದ್ (ಗುಜರಾತ್):ಬಿಜೆಪಿ ನಾಯಕತ್ವದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಸ್ವಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದ ಗುಜರಾತ್ನ ಹಾರ್ದಿಕ್ ಪಾಟೀಲ್ಗೆ ಇದೀಗ ಪಕ್ಷ ಬಹುದೊಡ್ಡ ಪೆಟ್ಟು ನೀಡಿದೆ ಎಂಬ ಮಾತು ಕೇಳಿ ಬರ್ತಿದೆ. ಗುಜರಾತ್ನಲ್ಲಿ ಪಾಟಿದಾರ್ ಸಮುದಾಯದ ನಾಯಕ ಹಾಗೂ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಾಟೀಲ್ ಬಳಕೆ ಮಾಡ್ತಿದ್ದ ಟ್ಟಟರ್ನಲ್ಲಿ 'ಕಾಂಗ್ರೆಸ್ನ ಕಾರ್ಯಾಧ್ಯಕ್ಷ' ಎಂಬ ಪದ ತೆಗೆದು ಹಾಕಲಾಗಿದೆ. ಇದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಸ್ವಪಕ್ಷದ ವಿರುದ್ಧ ವಾಗ್ದಾಳಿ... ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ಹಾರ್ದಿಕ್ ವಜಾ!? - ಹಾರ್ದಿಕ್ ಪಟೇಲ್ ಟ್ವೀಟರ್
ಬಿಜೆಪಿ ನಾಯಕತ್ವದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಸ್ವಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದ ಗುಜರಾತ್ನ ಹಾರ್ದಿಕ್ ಪಾಟೀಲ್ಗೆ ಇದೀಗ ಪಕ್ಷ ಬಹುದೊಡ್ಡ ಪೆಟ್ಟು ನೀಡಿದೆ ಎಂಬ ಮಾತು ಕೇಳಿ ಬರ್ತಿದೆ. ಇದಕ್ಕೆ ಪೂರಕ ರೀತಿಯಲ್ಲಿ ಹಾರ್ದಿಕ್ ಪಾಟೀಲ್ ಟ್ವಿಟರ್ ಕೂಡ ಕೆಲವೊಂದು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
Hardik Patel
ಈ ವರ್ಷದ ಅಂತ್ಯದಲ್ಲಿ ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಈ ಬೆಳವಣಿಗೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಬಹಿರಂಗವಾಗಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದ ಹಾರ್ದಿಕ್, ಪಕ್ಷ ತಮ್ಮನ್ನು ಕಡೆಗಣನೆ ಮಾಡ್ತಿದೆ ಎಂದು ಹೇಳಿದ್ದರು. ಇದಾದ ಬಳಿಕ ಮಾತನಾಡಿದ್ದ ಹಾರ್ದಿಕ್, ತಾವು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದರು.