ಕರ್ನಾಟಕ

karnataka

ನನ್ನ ಮುಂದಿನ ಪ್ರವಾಸ ಲಕ್ಷದ್ವೀಪಕ್ಕೆ ಎಂದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ

By ETV Bharat Karnataka Team

Published : Jan 8, 2024, 11:12 AM IST

ಮಾಲ್ಡೀವ್ಸ್​​ ಸಚಿವರ ಹೇಳಿಕೆಯನ್ನು ಟೀಕಿಸಿರುವ ಹಾರ್ದಿಕ್​ ಪಾಂಡ್ಯ, ತಮ್ಮ ಮುಂದಿನ ಪ್ರವಾಸ ಲಕ್ಷದ್ವೀಪಕ್ಕೆ ಎಂದು ಹೇಳಿದ್ದಾರೆ.

Etv Bharat
Etv Bharat

ಮುಂಬೈ: ಭಾರತೀಯರ ವಿರುದ್ಧ ಜನಾಂಗಿಯ ನಿಂದನೆ ಮಾಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಅಣಕವಾಡಿದ ಮಾಲ್ಡೀವ್ಸ್ ರಾಜಕಾರಣಿ ಜಾಹಿದ್ ರಮೀಜ್ ಮತ್ತು ಅಲ್ಲಿನ ಸಚಿವೆ ಮರಿಯಮ್ ಶಿಯುನಾ ಅವರ ಕೃತ್ಯಕ್ಕೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳೂ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಮಾಲ್ಡೀವ್ಸ್​ ಸಚಿವರ ಹೇಳಿಕೆಯನ್ನು ಟೀಕಿಸಿದ್ದಾರೆ.

ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಈ ಕುರಿತು ಪೋಸ್ಟ್​ ಮಾಡಿ​, ಭಾರತೀಯರ ಬಗ್ಗೆ ಮಾಲ್ಡೀವ್ಸ್​ ಸಚಿವರ ಹೇಳಿಕೆ ಖಂಡನೀಯ ಮತ್ತು ತುಂಬಾ ದುಃಖಕರವಾಗಿದೆ. ಕಣ್ಮನ ಸೆಳೆಯುವ ಸಮುದ್ರ, ಸುಂದರವಾದ ಕಡಲತೀರಗಳನ್ನು ಹೊಂದಿರುವ ಲಕ್ಷದ್ವೀಪವು ಪ್ರವಾಸಕ್ಕೆ ಪರಿಪೂರ್ಣವಾದ ಸ್ಥಳ. ನನ್ನ ಮುಂದಿನ ರಜಾದಿನಗಳಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

ಬಾಯ್ಕಟ್​ ಮಾಲ್ಡೀವ್ಸ್​ ಟ್ರೆಂಡಿಂಗ್​:ಮಾಲ್ಡೀವ್ಸ್​ನ ರಾಜಕಾರಣಿಗಳ ನಿಂದನೆ ಬೆನ್ನಲ್ಲೆ ಸಾಮಾಜಿಕ ಮಾಧ್ಯಮದಲ್ಲಿ #BoycottMaldives ಟ್ರೆಂಡಿಂಗ್ ಶುರುವಾಗಿದೆ. ಸೆಲೆಬ್ರಿಟಿಗಳು ಸೇರಿದಂತೆ ಹಲವಾರು ಭಾರತೀಯರು ಮಾಲ್ಡಿವ್ಸ್​ಗೆ ತಮ್ಮ ಯೋಜಿತ ಪ್ರವಾಸಗಳನ್ನು ರದ್ದುಗೊಳಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಹಲವಾರು ಬಳಕೆದಾರರು ಲಕ್ಷದ್ವೀಪದ ದ್ವೀಪಗಳ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಜತೆಗೆ ಸೆಲೆಬ್ರಿಟಿಗಳು ಭಾರತೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತೆ ಕರೆ ನೀಡಿದ್ದಾರೆ.

ಬಾಲಿವುಡ್ ನಟ ಜಾನ್ ಅಬ್ರಹಾಂ ಲಕ್ಷದ್ವೀಪ ದ್ವೀಪಗಳಿಗೆ ಭೇಟಿ ನೀಡುವಂತೆ ಪ್ರವಾಸಿಗರಿಗೆ ಶಿಫಾರಸು ಮಾಡಿದ್ದಾರೆ. "ಭಾರತೀಯರ ಅದ್ಭುತ ಆತಿಥ್ಯದೊಂದಿಗೆ, ಅತಿಥಿ ದೇವೋ ಭವ ಕಲ್ಪನೆ ಮತ್ತು ಅನ್ವೇಷಿಸಲು ವಿಶಾಲವಾದ ಸಮುದ್ರ ಜೀವಿಗಳು. ಲಕ್ಷದ್ವೀಪವು ನೀವು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ" ಎಂದು ಹೇಳಿದ್ದಾರೆ.

ಲಕ್ಷದ್ವೀಪದ ಬಗ್ಗೆ ಹೆಚ್ಚಿನ ಹುಡುಕಾಟ: ಭಾರತದ ದ್ವೀಪಗಳಿಗೆ ಉತ್ತೇಜನ ನೀಡಲು ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ವೇಳೆ ಅವರು ತೆಗೆಸಿಕೊಂಡ ಸ್ನೋರ್ಕೆಲಿಂಗ್​ನ ಚಿತ್ರಗಳು ಹೆಚ್ಚು ಗಮನ ಸೆಳೆದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಜನ ಲಕ್ಷದ್ವೀಪ ಮತ್ತು ಮಾಲ್ಡೀವ್ಸ್​ಗಳನ್ನು ಹೋಲಿಕೆ ಮಾಡಿ, ಮಾಲ್ಡೀವ್ಸ್​ಗಿಂತ ಲಕ್ಷದ್ವೀಪವೇ ಸುಂದರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಕಳೆದ ಕೆಲ ದಿನಗಳಿಂದ ಜನರು ಇಂಟರ್​ನೆಟ್​ನಲ್ಲಿ ಲಕ್ಷದ್ವೀಪದ ಬಗ್ಗೆ ಹೆಚ್ಚಿನ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿ ವಿರುದ್ಧ ಹೇಳಿಕೆ: ಮೂವರು ಸಚಿವರನ್ನು ಅಮಾನತುಗೊಳಿಸಿದ ಮಾಲ್ಡೀವ್ಸ್ ಸರ್ಕಾರ

ABOUT THE AUTHOR

...view details