ಬರೇಲಿ (ಉತ್ತರ ಪ್ರದೇಶ) :ಉತ್ತರಪ್ರದೇಶದಲ್ಲಿ ಎರಡನೇ ಅವಧಿಗೆ ಭಾರತೀಯ ಜನತಾ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. 403 ಕ್ಷೇತ್ರಗಳ ವಿಧಾನಸಭೆಗಳಲ್ಲಿ 255 ಸ್ಥಾನಗಳಲ್ಲಿ ಗೆದ್ದಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಮುಂದಿನ ಕೆಲ ದಿನಗಳಲ್ಲಿ ನೂತನ ಸರ್ಕಾರ ರಚಿಸಲಿದೆ. ಇದರ ಮಧ್ಯೆ ಬಿಜೆಪಿಗೆ ಮತ ಹಾಕಿರುವುದಕ್ಕಾಗಿ ಮುಸ್ಲಿಂ ಮಹಿಳೆಯೋರ್ವಳಿಗೆ ಗಂಡನ ಮನೆಯವರು ಥಳಿಸಿ, ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಉತ್ತರಪ್ರದೇಶದಲ್ಲಿ ತ್ರಿವಳಿ ತಲಾಖ್ ವಿರುದ್ಧದ ಕಾನೂನು ಜಾರಿಯಲ್ಲಿದೆ. ಬಿಜೆಪಿಗೆ ಮತ ಹಾಕಿದ್ದಾಳೆಂಬ ಕಾರಣಕ್ಕಾಗಿ ಆಕ್ರೋಶಗೊಂಡಿರುವ ಗಂಡನ ಮನೆಯವರು ಮಹಿಳೆಯನ್ನ ಥಳಿಸಿ ಹೊರ ಹಾಕಿದ್ದಾಳೆ. ಇದರ ಜೊತೆಗೆ ವಿಚ್ಛೇದನ ನೀಡುವ ಬೆದರಿಕೆ ಹಾಕಿದ್ದಾರೆ.
ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ. ಇದರ ಬೆನ್ನಲ್ಲೇ ಸಂತ್ರಸ್ತೆ, ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಸಹೋದರಿ ಫರ್ಹತ್ ನಖ್ವಿ ಅವರನ್ನ ಭೇಟಿ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.