ಕರ್ನಾಟಕ

karnataka

ETV Bharat / bharat

ಕಿರುಕುಳ ಪ್ರಕರಣ: ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ - ಮುಂಬೈನ ಪೊಲೀಸರಿಂದ ಗಣೇಶ್​ ಆಚಾರ್ಯ ವಿರುದ್ಧ ಕೋರ್ಟ್​ಗೆ ಚಾರ್ಚ್​ಶೀಟ್​​ ಸಲ್ಲಿಕೆ

2020 ರಲ್ಲಿ ಗಣೇಶ್ ಆಚಾರ್ಯ ವಿರುದ್ಧ ಮಹಿಳಾ ನರ್ತಕಿಯೊಬ್ಬರು ಲೈಂಗಿಕ ದೌರ್ಜನ್ಯ, ಹಿಂಬಾಲಿಸುವುದು, ಕಿರುಕುಳದ ಆರೋಪ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಮುಂಬೈನ ಪೊಲೀಸರು ಅವರ ವಿರುದ್ಧ ಕೋರ್ಟ್​ಗೆ ಚಾರ್ಚ್​ಶೀಟ್​​ ಸಲ್ಲಿಕೆ ಮಾಡಿದ್ದಾರೆ.

ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ
ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ

By

Published : Apr 1, 2022, 5:15 PM IST

ಹೈದರಾಬಾದ್: ಬಾಲಿವುಡ್​​ನ ಹಿರಿಯ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮುಂಬೈನ ಪೊಲೀಸರು ಅವರ ವಿರುದ್ಧ ಕೋರ್ಟ್​ಗೆ ಚಾರ್ಚ್​ಶೀಟ್​​ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳಾ ಡ್ಯಾನ್ಸರ್​ರೊಬ್ಬರು ಲೈಂಗಿಕ ದೌರ್ಜನ್ಯ, ಹಿಂಬಾಲಿಸುವುದು ಮತ್ತು ಕಿರುಕುಳದ ಆರೋಪ ಮಾಡಿದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣ 2020ರಲ್ಲಿ ದಾಖಲಾಗಿದ್ದು, ಇತ್ತೀಚೆಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೃತ್ಯ ನಿರ್ದೇಶಕರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ನೃತ್ಯ ನಿರ್ದೇಶಕನ ವಿರುದ್ಧ ಪೊಲೀಸರು ಹಲವು ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿ ಆರೋಪಪಟ್ಟಿ ಕೂಡ ಸಲ್ಲಿಸಿದ್ದಾರೆ. ಮುಂಬೈ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ನೃತ್ಯ ನಿರ್ದೇಶಕರ ಸಹಾಯಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಗೋವಾ ಕಲಾ ಉತ್ಸವದಲ್ಲಿ ಭಾರತ ಗೌರವ ಪ್ರಶಸ್ತಿ ಪಡೆದ ನಟಿ - ಮಾಡೆಲ್ ಪೂಜಾ ರಮೇಶ್

ಮಹಿಳಾ ಸಹ - ನರ್ತಕಿ ಪ್ರಕಾರ, ಅವರು ಗಣೇಶ್ ಆಚಾರ್ಯ ಅವರೊಂದಿಗಿನ ಹಲವಾರು ಸಭೆಗಳಲ್ಲಿ ವಿರೋಧಿಸಿದ್ದರು. ಹೀಗಾಗಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ಗಣೇಶ್ ಆಚಾರ್ಯ ಅವರ ಸಹಾಯಕಿ ಆಕೆಗೆ ಥಳಿಸಿದ್ದು, ಮಾನಹಾನಿ ಮಾಡಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ. ಅಲ್ಲದೇ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಹಾಗಾಗಿ ನಾನು ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ಗಣೇಶ್ ಆಚಾರ್ಯ ಭಾರತೀಯ ಚಿತ್ರರಂಗದ ಪ್ರಸಿದ್ಧ ನೃತ್ಯ ಸಂಯೋಜಕ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ 'ಪುಷ್ಪಾ-ದಿ ರೈಸ್-ಪಾರ್ಟ್-1' ಸೂಪರ್‌ಹಿಟ್ ಹಾಡಿನ 'ಊ​ ಅಂತವಾ' ಹಾಡಿಗೆ ನೃತ್ಯ ಸಂಯೋಜನೆಯನ್ನು ಇವರೇ ಮಾಡಿದ್ದರು. ಇದರ ನಂತರ, ಅವರು ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ' ಚಿತ್ರದ ಶೀರ್ಷಿಕೆ ಗೀತೆ 'ಬಚ್ಚನ್ ಪಾಂಡೆ'ಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.


For All Latest Updates

ABOUT THE AUTHOR

...view details