ಕೃಷ್ಣಾ(ಆಂಧ್ರಪ್ರದೇಶ):ಬೆಟ್ಟಿಂಗ್ ನಡೆಸುವುದು ಕಾನೂನುಬಾಹಿರವಾದರೂ ಎಗ್ಗಿಲ್ಲದೇ ನಡೆಯುತ್ತಿದೆ. ಬೆಟ್ಟಿಂಗ್ ಮಾಡಿದ ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಂತಹದ್ದೇ ಪ್ರಕರಣ ಆಂಧ್ರಪ್ರದೇಶದಲ್ಲಿ ನಡೆದಿದೆ. ಬೆಟ್ಟಿಂಗ್ ಮಾಡಿದ್ದ ಯುವಕನೊಬ್ಬ ಹಣ ಹಿಂತಿರುಗಿಸಲಾಗದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೃಷ್ಣಾ ಜಿಲ್ಲೆಯ ಉಂಗುಟೂರು ವಲಯದ ಇಂದುಪಲ್ಲಿಯಲ್ಲಿ ಘಟನೆ ನಡೆದಿದೆ. ಕ್ರಿಕೆಟ್ ಬೆಟ್ಟಿಂಗ್ ನಡೆಸುವವರ ಕಿರುಕುಳ ತಾಳಲಾರದೇ ಜ್ಞಾನ ಪ್ರವೀಣ್ ಎಂಬ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಕಂಡ ಮನೆಯವರು ತಕ್ಷಣವೇ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.