ನವದೆಹಲಿ: ವಿಶ್ವ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಪುರಾತತ್ವ ಸ್ಥಳವಾದ ದೋಲವಿರಾ ಹೆಚ್ಚಿಸಿದೆ. ಗುಜರಾತ್‌ನ ಹರಪ್ಪನ್ ನಗರದ ಧೋಲವಿರಾವನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಯುನೆಸ್ಕೋದ ಸಾಂಸ್ಕೃತಿಕ ಸಂಸ್ಥೆ ಇಂದು ದೃಢಪಡಿಸಿದೆ.
ತನ್ನ ಅಧಿಕೃತ ಟ್ವಿಟ್ಟರ್ ಬ್ರೇಕಿಂಗ್ ಎಂದು ಮಾಹಿತಿಯನ್ನು ಹಂಚಿಕೊಂಡಿರುವ ಯುನೆಸ್ಕೋ, ಧೋಲಾವಿರಾ: ಭಾರತದ ಭೂಪಟದಲ್ಲಿರುವ ಹರಪ್ಪನ್ ನಗರದ ಧೋಲಾವಿರಾವನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. ಅಭಿನಂದನೆಗಳು ಎಂದು ಟ್ವೀಟಿಸಿದೆ.
ಚೀನಾದ ಫುಜೌನಲ್ಲಿ ನಡೆದ ಯುನೆಸ್ಕೋ ವಿಶ್ವ ಪರಂಪರೆಯ ಸಮಿತಿಯ 44ನೇ ಅಧಿವೇಶನದಲ್ಲಿ, ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ತೆಲಂಗಾಣದ ಕಾಕಟ್ಯಾ ರುದ್ರೇಶ್ವರ (ರಾಮಪ್ಪ) ದೇವಸ್ಥಾನ ಹಾಗೂ ಗುಜರಾತ್‌ನ ಧೋಲವಿರಾವನ್ನು ಯುನೆಸ್ಕೋದ ವಿಶ್ವ ಪರಂಪರಿಕ ಪಟ್ಟಿಗೆ ಸೇರಿಸಲಾಗಿದೆ.
ಧೋಲಾವಿರಾ ಪಶ್ಚಿಮ ಭಾರತದ ಗುಜರಾತ್‌ನ ಕಚ್ ಜಿಲ್ಲೆಯ ಭಚೌ ತಾಲೂಕಿನ ಖಾದಿರ್ಬೆಟ್‌ನಲ್ಲಿರುವ ಪುರಾತತ್ವ ತಾಣವಾಗಿದೆ. ಈ ಪ್ರದೇಶ ದಕ್ಷಿಣದಿಂದ 1 ಕಿಲೋಮೀಟರ್ ದೂರದಲ್ಲಿರುವ ಆಧುನಿಕ ಕಾಲದ ಹಳ್ಳಿಯ ಹೆಸರನ್ನು ಪಡೆದುಕೊಂಡಿದೆ. ಈ ಗ್ರಾಮವು ರಾಧನ್‌ಪುರದಿಂದ 165 ಕಿ.ಮೀ ದೂರದಲ್ಲಿದೆ.