ಕರ್ನಾಟಕ

karnataka

ETV Bharat / bharat

ಕಂಚು ಗೆದ್ದ ಭಾರತ​: ಕುಟುಂಬಸ್ಥರೊಂದಿಗೆ ಸಂತಸ ಹಂಚಿಕೊಂಡ ಮನ್​ದೀಪ್ ಸಿಂಗ್- Video

ಹಾಕಿ ಆಟಗಾರ ಮನ್ ದೀಪ್ ಸಿಂಗ್ ಅವರು ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿರುವ ಕುರಿತು ವಿಡಿಯೋ ಮೂಲಕ ತಮ್ಮ ಕುಟುಂಬಸ್ಥರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಮನ್​ದೀಪ್ ಸಿಂಗ್
ಮನ್​ದೀಪ್ ಸಿಂಗ್

By

Published : Aug 5, 2021, 11:58 AM IST

Updated : Aug 5, 2021, 2:12 PM IST

ಟೋಕಿಯೊ: ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್​ನಲ್ಲಿ ಜರ್ಮನಿ ತಂಡದ ವಿರುದ್ಧ ಗೆಲುವು ಸಾಧಿಸಿ, ಕಂಚಿನ ಪದಕ ಗೆಲ್ಲುವ ಮೂಲಕಇತಿಹಾಸ ಸೃಷ್ಟಿಸಿದೆ. ಈ ಮೂಲಕ ಭಾರತೀಯರ ಕನಸು ನನಸಾಗಿದ್ದು, ಈ ಸುಂದರ ಕ್ಷಣವನ್ನು ಹಾಕಿ ಆಟಗಾರ ಮನ್ ದೀಪ್ ಸಿಂಗ್ ಕುಟುಂಬಸ್ಥರೊಂದಿಗೆ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಬರೋಬ್ಬರಿ 41 ವರ್ಷಗಳ ಬಳಿಕ ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್​ನಲ್ಲಿ ಗೆದ್ದು ಬೀಗಿದೆ. ಜರ್ಮನಿ ತಂಡದ ವಿರುದ್ಧ 5-4 ಗೋಲುಗಳ ಅಂತರದಿಂದ ಸ್ಮರಣೀಯ ಗೆಲುವು ದಾಖಲಿಸಿ ಸಂಭ್ರಮಿಸಿದೆ. ಆಕ್ರಮಣಕಾರಿ ಹಾಕಿ ಆಟಗಾರ ಎಂದೇ ಪ್ರಖ್ಯಾತರಾದ ಮನ್​ದೀಪ್ ಸಿಂಗ್ ಅವರು ಗೆಲುವು ದಾಖಲಿಸಿ ಸಂಭ್ರಮಿಸಿದ ಕ್ಷಣಗಳನ್ನು ಮೆಲುಕು ಹಾಕಿ, ಸಂತೋಷದ ಕ್ಷಣಗಳನ್ನು ಕುಟುಂಬಸ್ಥರೊಂದಿಗೆ ಹಂಚಿಕೊಂಡ ವಿಡಿಯೋ ಇಲ್ಲಿದೆ ನೋಡಿ.

ಕುಟುಂಬಸ್ಥರೊಂದಿಗೆ ಸಂತಸದ ಕ್ಷಣ ಹಂಚಿಕೊಂಡ ಮನ್​ ದೀಪ್ ಸಿಂಗ್
Last Updated : Aug 5, 2021, 2:12 PM IST

ABOUT THE AUTHOR

...view details