ಕರ್ನಾಟಕ

karnataka

ETV Bharat / bharat

ಅಪಘಾತದಲ್ಲಿ ಕೈ ಕಳೆದುಕೊಂಡ ಕೋವಿಡ್​ ರೋಗಿ: ಶಸ್ತ್ರಚಿಕಿತ್ಸೆ ಮೂಲಕ ಕೈ ಜೋಡಿಸಿದ ವೈದ್ಯರು - ರೈಲ್ವೆ ಅಪಘಾತದ ವೇಳೆ ಕೈ ಮುರಿತು

ರೈಲ್ವೆ ಅಪಘಾತದ ವೇಳೆ ಕೈ ಕಳೆದುಕೊಂಡಿದ್ದ ಕೋವಿಡ್ ರೋಗಿಗೆ ವೈದ್ಯರು 11 ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ಕೈ ಮರುಜೋಡಣೆ ಮಾಡಿದ್ದಾರೆ.

Hand of Covid patient
Hand of Covid patient

By

Published : Apr 28, 2021, 5:18 PM IST

ಮುಂಬೈ(ಮಹಾರಾಷ್ಟ್ರ):ರೈಲ್ವೆ ಅಪಘಾತದ ವೇಳೆ ಕೈ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಕೈ ಜೋಡಿಸಲಾಗಿದ್ದು, ಇದೀಗ ವೈದ್ಯರ ಪ್ರಯತ್ನದಿಂದ ಆತನಿಗೆ ಮರುಜನ್ಮ ಸಿಕ್ಕಿದೆ.

ಶಸ್ತ್ರಚಿಕಿತ್ಸೆ ಮೂಲಕ ಕೈ ಜೋಡಿಸಿದ ವೈದ್ಯರು

ಉತ್ತರ ಪ್ರದೇಶದ ಮೂಲದ ವ್ಯಕ್ತಿ ಅಜಿತ್ ಕುಮಾರ್​ ಮಾರ್ಚ್​ 16ರಂದು ಭೈಖಲಾ ರೈಲ್ವೆ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದ್ದರು. ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಕೋವಿಡ್​ ಪರೀಕ್ಷೆ ನಡೆಸಿದಾಗ ಪಾಸಿಟಿವ್​ ಇರುವುದು ದೃಢಗೊಂಡಿದೆ. ಇದರ ಮಧ್ಯೆ ಕೂಡ ವೈದ್ಯರಾದ ಡಾ. ಚಂದ್ರಕಾಂತ್​ ಹಾಗೂ ಡಾ. ಯೋಗೆಶ್​ ಜೈಸ್ವಾಲ್​ ಯಶಸ್ವಿ 11 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಕೈ ಮರು ಜೋಡಣೆ ಮಾಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 15 ದಿನ ಲಾಕ್​ಡೌನ್ ವಿಸ್ತರಣೆ ಸಾಧ್ಯತೆ.. ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಸಿಗಲ್ಲ ವ್ಯಾಕ್ಸಿನ್​​!

ಅಜಿತ್ ಕುಮಾರ್​ ಮಾನಸಿಕವಾಗಿ ಸ್ಥಿರವಾಗಿಡಲು ಶಸ್ತ್ರಚಿಕಿತ್ಸೆ ವೇಳೆ ಉತ್ತರ ಪ್ರದೇಶದ ಹಾಡು ಸ್ಥಳೀಯ ಭಾಷೆಯಲ್ಲಿ ವಿಡಿಯೋ ತೋರಿಸಿದ್ದಾರೆ. ಅಪಘಾತದ ವೇಳೆ ಕೈ ಮುಂದಿನ ಭಾಗ ಸಂಪೂರ್ಣವಾಗಿ ಮುರಿದು ಹೋಗಿದೆ. ಮುರಿದ ಕೈಯಲ್ಲಿನ ನರ ಜೋಡಿಸಲು ಕಾಲಿನಿಂದ ಒಂದು ನರ ಬಳಿಸಿದ್ದಾರೆ. ಜತೆಗೆ ಹೊಟ್ಟೆಯಿಂದ ಚರ್ಮದ ಒಂದು ಭಾಗ ತೆಗೆದಯಕೊಂಡು ಶಸ್ತ್ರಚಿಕಿತ್ಸೆ ಮಾಡಿರುವ ಜಾಗಕ್ಕೆ ಬಳಕೆ ಮಾಡಿದ್ದಾರೆ. ಇದೀಗ ಆತ ಚೇತರಿಸಿಕೊಳ್ಳುತ್ತಿದ್ದು, ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರಿಗೆ ಧನ್ಯವಾದ ಹೇಳಿದ್ದಾನೆ.

ABOUT THE AUTHOR

...view details