ಹಮೀರ್‌ಪುರ (ಹಿಮಾಚಲ ಪ್ರದೇಶ): ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜ್ಯೂನಿಯರ್ ಬೇಸಿಕ್ ಟ್ರೈನಿಂಗ್ (ಜೆಬಿಟಿ) ಶಿಕ್ಷಕಿಯೊಬ್ಬರಿಗೆ ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 1 ಲಕ್ಷ ರೂ. ದಂಡ ಪಾವತಿಸಲು ಸೂಚಿಸಿದೆ.
2019ರ ಪ್ರಕರಣ ಇದಾಗಿದ್ದು, ಅಮ್ನೆಧ್‌ನ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿ ರಜನಿ ಕುಮಾರಿ ಅವರು 4ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಅಮಾನುಷವಾಗಿ ಥಳಿಸಿದ್ದಲ್ಲೇ ಜಾತಿ ನಿಂದನೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ದೂರು ಸ್ವೀಕರಿಸಿದ ರಾಜ್ಯ ಶಿಕ್ಷಣ ಇಲಾಖೆಯು ಆರೋಪಿ ಶಿಕ್ಷಕಿಯನ್ನು ಅಮಾನತುಗೊಳಿಸಿ, ಕೆಲ ತಿಂಗಳ ಬಳಿಕ ಬೇರೆ ಶಾಲೆಗೆ ನೇಮಕ ಮಾಡಿತ್ತು.