ಕರ್ನಾಟಕ

karnataka

ಪ್ರಾಣ ಪ್ರತಿಷ್ಠಾಪನೆ: ಜನವರಿ 22 ರಂದು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ

By PTI

Published : Jan 18, 2024, 3:19 PM IST

Updated : Jan 18, 2024, 3:39 PM IST

ರಾಮನ ಪ್ರಾಣ ಪ್ರತಿಷ್ಠಾಪನೆ ದಿನದಂದು ಸರ್ಕಾರಿ ಕಚೇರಿಗಳಿಗೆ ಕೇಂದ್ರ ಸರ್ಕಾರ ಅರ್ಧದಿನದ ರಜೆ ನೀಡಿದೆ.

ಪ್ರಾಣ ಪ್ರತಿಷ್ಠಾಪನೆ
ಪ್ರಾಣ ಪ್ರತಿಷ್ಠಾಪನೆ

ನವದೆಹಲಿ:ವಿಶ್ವವೇ ಕಾಯುತ್ತಿರುವ ಭವ್ಯ ರಾಮಮಂದಿರ ಉದ್ಘಾಟನೆಯ ದಿನವಾದ ಜನವರಿ 22 ರಂದು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧದಿನದ ರಜೆ ನೀಡಿ ಸರ್ಕಾರ ಗುರುವಾರ ಆದೇಶಿಸಿದೆ. ಅಂದು ಮಧ್ಯಾಹ್ನ 2.30 ರವರೆಗೆ ಕಚೇರಿಗಳಿಗೆ ಬಿಡುವು ನೀಡಲಾಗುತ್ತಿದೆ ಎಂದು ತಿಳಿಸಿದೆ.

ಭಗವಾನ್​ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ದೇಶದ ಜನರ ಭಾವನಾತ್ಮಕ ವಿಷಯವಾಗಿದೆ. ಹೀಗಾಗಿ ಅಂದಿನ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಸರ್ಕಾರಿ ನೌಕರರಿಗೂ ಅವಕಾಶ ನೀಡುವ ಸಲುವಾಗಿ ಎಲ್ಲ ಸರ್ಕಾರಿ ಕಚೇರಿಗಳಿಗೆ ಅರ್ಧದಿನದ ರಜೆ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಾಧ್ಯಮಗಳಿಗೆ ಗುರುವಾರ ಹೇಳಿಕೆ ನೀಡಿದರು.

ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಎಲ್ಲ ರಾಮಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಇದೊಂದು ಭಕ್ತಿ ಭಾವದ ಸಮಾರಂಭವಾದ ಕಾರಣ, ಸಾರ್ವಜನಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಜನವರಿ 22 ರಂದು ಅರ್ಧ ದಿನ ಸರ್ಕಾರಿ ಕಚೇರಿಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ದೇಶಾದ್ಯಂತ ಸಾರ್ವಜನಿಕರಿಂದ ಭಾರಿ ಬೇಡಿಕೆ ವ್ಯಕ್ತವಾಗಿತ್ತು ಎಂದು ಅವರು ತಿಳಿಸಿದರು.

ಕಚೇರಿಗಳಿಗೆ ನೋಟಿಸ್​​ ರವಾನೆ:ಜನವರಿ 22 ರಂದು ಕೇಂದ್ರ ಸರ್ಕಾರ ಕಚೇರಿಗಳಿಗೆ ನೀಡಲಾಗಿರುವ ರಜೆಯ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದ ನೋಟಿಸ್​ ಅನ್ನು ಎಲ್ಲ ಕಚೇರಿಗಳಿಗೆ ರವಾನಿಸಲಾಗಿದೆ. ಅದರಲ್ಲಿ, ಜನವರಿ 22 ರಂದು ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದರಲ್ಲಿ ಸರ್ಕಾರಿ ದೇಶದ ಜನರೊಂದಿಗೆ ಸರ್ಕಾರಿ ನೌಕರರೂ ಭಾಗವಹಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಹೀಗಾಗಿ ದೇಶದ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳು, ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳನ್ನು ಅರ್ಧ ದಿನ ಮುಚ್ಚಲು ನಿರ್ಧರಿಸಲಾಗಿದೆ. ಅಂದು ಮಧ್ಯಾಹ್ನ 2.30 ರವರೆಗೆ ಕಚೇರಿಗಳಿಗೆ ಬಿಡುವು ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಸಿಬ್ಬಂದಿ ಸಚಿವಾಲಯ ಇಲಾಖೆಗಳಿಗೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ನೂತನ ವಿಗ್ರಹದ 'ಪ್ರಾಣ ಪ್ರತಿಷ್ಠಾ' ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ರಾಮನ ವಿಗ್ರಹವನ್ನು ಜಗುಲಿಯ ಮೇಳೆ ಅವರೇ ಪ್ರತಿಷ್ಠಾಪನೆ ಮಾಡಲಿದ್ದಾರೆ. ಭವ್ಯ ಮಂದಿರದ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನ ವಿಗ್ರಹವನ್ನು ಅಂದು ಮಧ್ಯಾಹ್ನ 12.28 ಕ್ಕೆ ಆರಂಭಗೊಂಡು 12.30 ರ ಒಳಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ.

ಇದನ್ನೂ ಓದಿ:'ಜೈ ಶ್ರೀ ರಾಮ್' ಘೋಷಣೆಯೊಂದಿಗೆ ಅಯೋಧ್ಯೆ ದೇಗುಲದ ಗರ್ಭಗುಡಿ ತಲುಪಿದ ರಾಮಲಲ್ಲಾ ಮೂರ್ತಿ

Last Updated : Jan 18, 2024, 3:39 PM IST

ABOUT THE AUTHOR

...view details