ಹೈದರಾಬಾದ್: ನಾಳೆಯಿಂದ ಮೂರು ದಿನಗಳ ಕಾಲ ಹೈದರಾಬಾದ್‌ನ ಬೇಗಂಪೇಟ್ ವಿಮಾನ ನಿಲ್ದಾಣದಲ್ಲಿ 'ವಿಂಗ್ಸ್ ಇಂಡಿಯಾ 2024'ಕ್ಕೆ ಚಾಲನೆ ದೊರೆಯಲಿದೆ. ಇಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತನ್ನ ದೇಶಿಯ ನಾಗರಿಕ ವಿಮಾನಗಳಾದ ಹಿಂದೂಸ್ತಾನ್ 228 ಏರ್ಕ್ರಾಫ್ಟ್ ಮತ್ತು ಎಎಲ್ಎಚ್ ಧ್ರುವ ಎಂಬ ದೇಶಿಯ ಹೆಲಿಕ್ಟಾಪರ್‌ಗಳನ್ನು ಪ್ರದರ್ಶಿಸಲಿದೆ.
ಭಾರತದ ಪ್ರಾದೇಶಿಕ ಸಂಪರ್ಕವನ್ನು ಪ್ರೋತ್ಸಾಹಿಸಲು ಎಚ್ಎಎಲ್ ಸ್ವದೇಶಿ ನಿರ್ಮಿತ ನಾಗರಿಕ ವಿಮಾನಗಳನ್ನು ಪ್ರಸ್ತುತಪಡಿಸಲಿದೆ. ಸಂಸ್ಥೆಯು ಡಿಒ-228 ಮತ್ತು ಎಚ್ಎಸ್-748 ಮುಂತಾದ ವಿಮಾನ ತಯಾರಿಕೆ ಸಾಮರ್ಥ್ಯ ಹೊಂದಿದೆ. ಅಲ್ಲದೇ, ಪ್ರಾದೇಶಿಕ ಸಾರಿಗೆ ವಿಮಾನದಂತಹ ನಾಗರಿಕ ವಿಮಾನ ಕಾರ್ಯಕ್ರಮಗಳಿಗೆ ತನ್ನ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದೆ. ಎಂಆರ್ಒ ಚಟುವಟಿಕೆಯಲ್ಲೂ ಎಚ್ಎಲ್ ಸಕ್ರಿಯ ಸಹಯೋಗ ಹೊಂದಿದೆ ಎಂದು ಎಚ್ಎಎಲ್ನ ಸಿಎಂಡಿ ಸಿ.ಬಿ.ಅನಂತಕೃಷ್ಣನ್ ತಿಳಿಸಿದ್ದಾರೆ.
ವಿಂಗ್ಸ್ ಇಂಡಿಯಾ ಪ್ರದರ್ಶನದಲ್ಲಿ ಎಚ್ಎಎಲ್ ಹಾಲ್ ಎ, ಸ್ಟಾಲ್ ನಂ 25ರಲ್ಲಿ ಇರಲಿದೆ. ಸಂಸ್ಥೆಯ ಈ ಮಳಿಗೆಯಲ್ಲಿ ಎಲ್‌ಯುಎಚ್, ಹಿಂದೂಸ್ತಾನ್-228, ಎಎಲ್ಎಚ್, ಎಲ್ಆರ್ಯು ಹಾಗು ನಾಗರಿಕ ವಿಮಾನಗಳಿಗೆ ಸಂಬಂಧಿಸಿದ ಬಿಡಿಭಾಗಗಳನ್ನು ಸಾರ್ವಜನಿಕರು ವೀಕ್ಷಿಸಬಹುದು.
ಎಚ್ಎಲ್ ಒಇಎಂ ಮತ್ತು ತನ್ನ ಗ್ರಾಹಕರೊಂದಿಗೆ ವ್ಯಾಪಾರ ಚರ್ಚೆ, ಸಭೆಗಳ ಹೊರತಾಗಿ ವ್ಯಾಪಾರಿ ಸಹೋದ್ಯೋಗಿಗಳೊಂದಿಗೆ ಹಲವು ಯೋಜನೆಗಳ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಿದೆ.
ಎಎಲ್ಎಚ್ ನಿರ್ಮಿತ ಧ್ರುವ ಹೆಲಿಕಾಪ್ಟರ್ ಧ್ರುವ ಹೆಲಿಕಾಪ್ಟರ್:ಇದು ಸುಧಾರಿತ ಹಗುರ ಹೆಲಿಕಾಪ್ಟರ್. 5.5 ಟನ್ ಭಾರ ಇದ್ದು ಎರಡು ಇಂಜಿನ್ ಹೊಂದಿದೆ. ಎಚ್ಎಎಲ್ ಇದರ ವಿನ್ಯಾಸ ಮತ್ತು ಅಭಿವೃದ್ಧಿ ಮಾಡಿದೆ. ವಿಪತ್ತು ನಿರ್ವಹಣೆ, ಪತ್ತೆ ಮತ್ತು ರಕ್ಷಣೆ (ಎಸ್ಎಆರ್), ಹೆಲಿ ಟೂರಿಸಂ, ವಿಐಪಿ ಪೆರ್ರಿ ಮುಂತಾದ ಪಾತ್ರವನ್ನು ಇದು ನಿರ್ವಹಿಸಲಿದೆ. ಈ ಹೆಲಿಕಾಪ್ಟರ್ ಸುಧಾರಿತ ಗ್ಲಾಸ್ ಕಾಕ್‌ಪಿಟ್ ಮತ್ತು ಏವಿಯಾನಿಕ್ಸ್ ಹೊಂದಿದೆ.
ಹಿಂದೂಸ್ತಾನ್ 228:ಇದು ಬಹುಪಯೋಗಿ ವಿಮಾನ. ಎಚ್ಎಲ್ ನಿರ್ಮಿತ ಕಡಿಮೆ ತೂಕದ ಎರಡು ಟರ್ಬೊಪ್ರಾಪ್ ಹೊಂದಿದೆ. ಉಡಾನ್ ಅಡಿಯಲ್ಲಿ ಅಲ್ಪಾವಧಿಯ ವಾಯು ಮಾರ್ಗಗಳಲ್ಲಿ ದೂರ ಪ್ರಾದೇಶಿಕ ಸಂಪರ್ಕ ಹೊಂದಲಿದೆ. ಇದೂ ಕೂಡ ಪ್ರಾದೇಶಿಕ ವಿಮಾನಸೇವೆ/ಏರ್ ಟಾಕ್ಸಿ, ವಿಐಪಿ, ಪತ್ತೆ ಮತ್ತು ರಕ್ಷಣೆ, ಅಪಘಾತ ಸ್ಥಳಾಂತರ, ಆಂಬ್ಯುಲೆನ್ಸ್, ಏರಿಯಲ್ ಫೋಟೋಗ್ರಾಫಿ ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸಲಿದೆ. ವಿಮಾನದ ಕಾಕ್‌ಪಿಟ್ ಅನ್ನು ಸಂಪೂರ್ಣವಾಗಿ ಡಿಜಿಟಲ್ ಗ್ಲಾಸ್ ಕಾಕ್‌ಪಿಟ್ ರೀತಿ ನವೀಕರಿಸಲಾಗಿದೆ. ಇದು ಡಿಜಿಸಿಎ ಪ್ರಮಾಣಿತವಾಗಿದೆ.
ಸಿವಿಲ್ ಎಲ್‌ಯುಎಚ್: ಎಚ್ಎಎಲ್ ಹಗುರ ಯುಟಿಲಿಟಿ ಹೆಲಿಕಾಪ್ಟರ್‌ನ ನಾಗರಿಕ ರೂಪಾಂತರವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಸಂಸ್ಥೆಯು ಡಿಜಿಸಿಎ ಪ್ರಮಾಣಿತದೊಂದಿಗೆ ಎಲ್‌ಯುಎಚ್ ನಾಗರಿಕ ಮೂಲ ಮಾದರಿ ನಿರ್ಮಾಣ ಮಾಡುತ್ತಿದ್ದು, ಇದನ್ನು 2025ರ ಡಿಸೆಂಬರ್ ಹೊತ್ತಿಗೆ ಪೂರ್ಣಗೊಳಿಸಲಿದೆ.
ಇದನ್ನೂ ಓದಿ:ಹೈದರಾಬಾದ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರದರ್ಶನ; ಬೋಯಿಂಗ್ 777-9 ಆಕರ್ಷಣೆ