ಕರ್ನಾಟಕ

karnataka

ETV Bharat / bharat

ಗೋವಾದಲ್ಲಿ ಹೆಲಿಕಾಪ್ಟರ್ ಎಂಜಿನ್ MRO ಸೌಲಭ್ಯ ಸ್ಥಾಪಿಸಲು ಶಿಲಾನ್ಯಾಸ - ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಸಫ್ರಾನ್‌ನ ಜಂಟಿ ಉದ್ಯಮವಾದ ಹೆಲಿಕಾಪ್ಟರ್ ಇಂಜಿನ್ಸ್ ಎಂಆರ್‌ಒ ಪ್ರೈವೇಟ್ ಲಿಮಿಟೆಡ್

ಇದು 2023 ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದ್ದು, ವರ್ಷಕ್ಕೆ 50 ಎಂಜಿನ್‌ಗಳನ್ನು ದುರಸ್ತಿ ಮಾಡುವ ಸಾಮರ್ಥ್ಯ ಮತ್ತು ಮುಂಬರುವ ವರ್ಷಗಳಲ್ಲಿ 150 ಎಂಜಿನ್‌ಗಳ ಪೂರ್ಣ ಸಾಮರ್ಥ್ಯದ ಗುರಿಯನ್ನು ಹೊಂದಿದೆ ಎಂದು ಹೆಚ್‌ಎಎಲ್ ತಿಳಿಸಿದೆ.

ಗೋವಾದಲ್ಲಿ ಹೆಲಿಕಾಪ್ಟರ್ ಎಂಜಿನ್ MRO ಸೌಲಭ್ಯ ಸ್ಥಾಪಿಸಲು ಶಿಲಾನ್ಯಾಸ
ಗೋವಾದಲ್ಲಿ ಹೆಲಿಕಾಪ್ಟರ್ ಎಂಜಿನ್ MRO ಸೌಲಭ್ಯ ಸ್ಥಾಪಿಸಲು ಶಿಲಾನ್ಯಾಸ

By

Published : Mar 14, 2022, 7:47 PM IST

ಪಣಜಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಸಫ್ರಾನ್‌ನ ಜಂಟಿ ಉದ್ಯಮವಾದ ಹೆಲಿಕಾಪ್ಟರ್ ಇಂಜಿನ್ಸ್ ಎಂಆರ್‌ಒ ಪ್ರೈವೇಟ್ ಲಿಮಿಟೆಡ್ (ಹೆಚ್‌ಇ-ಎಂಆರ್‌ಒ) ಹೊಸ ಸೌಲಭ್ಯಕ್ಕಾಗಿ ಶಿಲಾನ್ಯಾಸ ಸಮಾರಂಭ ನೆರವೇರಿಸಿದೆ. ಗೋವಾದ ಪಣಜಿಯಿಂದ 40 ಕಿ.ಮೀ ದೂರದಲ್ಲಿರುವ ಸತ್ತಾರಿಯಲ್ಲಿ ಕಾರ್ಯಕ್ರಮ ಜರುಗಿದೆ.

ಇದು 2023 ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದ್ದು, ವರ್ಷಕ್ಕೆ 50 ಎಂಜಿನ್‌ಗಳನ್ನು ದುರಸ್ತಿ ಮಾಡುವ ಸಾಮರ್ಥ್ಯ ಮತ್ತು ಮುಂಬರುವ ವರ್ಷಗಳಲ್ಲಿ 150 ಎಂಜಿನ್‌ಗಳ ಪೂರ್ಣ ಸಾಮರ್ಥ್ಯದ ಗುರಿಯನ್ನು ಹೊಂದಿದೆ ಎಂದು ಹೆಚ್‌ಎಎಲ್ ತಿಳಿಸಿದೆ.

ಎರಡೂ ಕಂಪನಿಗಳು ಬಹು-ವರ್ಷದ ಹೂಡಿಕೆ ಯೋಜನೆಗೆ ಬದ್ಧವಾಗಿದ್ದು, ನಿರ್ಮಾಣ ಕಾರ್ಯವು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಹೆಚ್​ಎಎಲ್​ ಹೇಳಿದೆ.

ಹೆಚ್‌ಎಎಲ್ ಸಿಎಂಡಿ ಆರ್ ಮಾಧವನ್, ಸಫ್ರಾನ್ ಹೆಲಿಕಾಪ್ಟರ್ ಇಂಜಿನ್‌ಗಳ ಸಿಇಒ ಫ್ರಾಂಕ್ ಸೌಡೊ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಬೆಂಗಳೂರು ಕೇಂದ್ರ ಕಚೇರಿಯ ಹೆಚ್‌ಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಸಮಾರಂಭದಲ್ಲಿ, ಉಭಯ ಪಾಲುದಾರರು ತಮ್ಮ ಸಹಕಾರವನ್ನು ವಿಸ್ತರಿಸಲು ಮತ್ತು ನಾಗರಿಕ ಮತ್ತು ಮಿಲಿಟರಿ ಮಾರುಕಟ್ಟೆಗಳಲ್ಲಿ ಹೊಸ ಹೆಲಿಕಾಪ್ಟರ್ ಇಂಜಿನ್‌ಗಳ ಅವಕಾಶಗಳನ್ನು ಅನ್ವೇಷಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದರು. ರಕ್ಷಣೆ ವಿಷಯದಲ್ಲಿ ಸ್ವಾವಲಂಬನೆ ಸಾಧಿಸಲು ಭಾರತೀಯ ಸರ್ಕಾರದ ಆತ್ಮನಿರ್ಭರ ಭಾರತದ ಭಾಗವಾಗಿದೆ.

ಗೋವಾದಲ್ಲಿ ಹೆಲಿಕಾಪ್ಟರ್ ಎಂಜಿನ್ MRO ಸೌಲಭ್ಯ ಸ್ಥಾಪಿಸಲು ಶಿಲಾನ್ಯಾಸ

ಫ್ರಾಂಕ್ ಸೌಡೊ ಅವರು ಪ್ರತಿಕ್ರಿಯಿಸಿ, ಭಾರತದ ಸಶಸ್ತ್ರ ಪಡೆಗಳ ಹೆಲಿಕಾಪ್ಟರ್‌ಗಳಲ್ಲಿ TM333 ಮತ್ತು ಶಕ್ತಿ ಗ್ಯಾಸ್ ಟರ್ಬೈನ್‌ಗಳಿಗಾಗಿ ಈ ವಿಶ್ವ ದರ್ಜೆಯ MRO ಕೇಂದ್ರವನ್ನು ಪ್ರಾರಂಭಿಸಲು ನಾನು ತುಂಬಾ ಹೆಮ್ಮೆಪಡುತ್ತೇನೆ ಎಂದಿದ್ದಾರೆ.

ಗೋವಾದಲ್ಲಿ ಹೆಲಿಕಾಪ್ಟರ್ ಎಂಜಿನ್ MRO ಸೌಲಭ್ಯ ಸ್ಥಾಪಿಸಲು ಶಿಲಾನ್ಯಾಸ

ಸೌಲಭ್ಯವು 2023 ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದ್ದು, ವರ್ಷಕ್ಕೆ 50 ಎಂಜಿನ್‌ಗಳನ್ನು ದುರಸ್ತಿ ಮಾಡುವ ಸಾಮರ್ಥ್ಯ ಮತ್ತು ಮುಂಬರುವ ವರ್ಷಗಳಲ್ಲಿ 150 ಎಂಜಿನ್‌ಗಳ ಪೂರ್ಣ ಸಾಮರ್ಥ್ಯದ ಗುರಿಯನ್ನು ಹೊಂದಿದೆ. ಈ ಪ್ರದೇಶದ 60ಕ್ಕೂ ಹೆಚ್ಚು ಅರ್ಹ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತದೆ. ವರ್ಷಗಳಲ್ಲಿ ಬೆಳೆಯುತ್ತಿರುವ ಚಟುವಟಿಕೆಗಳೊಂದಿಗೆ ಉದ್ಯೋಗದ ಸಂಖ್ಯೆಯೂ ಹೆಚ್ಚಾಗುತ್ತದೆ. ಸೌಲಭ್ಯವು ಇತರ ಕಾರ್ಯಕ್ರಮಗಳಿಗೆ ವಿಸ್ತರಣೆ ಸಾಮರ್ಥ್ಯವನ್ನು ಹೊಂದಿದೆ ಮತ್ತು ಭವಿಷ್ಯದಲ್ಲಿ ಸಿವಿಲ್ ಅಥವಾ ಇತರ ಎಂಜಿನ್‌ಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ.

ಗೋವಾದಲ್ಲಿ ಹೆಲಿಕಾಪ್ಟರ್ ಎಂಜಿನ್ MRO ಸೌಲಭ್ಯ ಸ್ಥಾಪಿಸಲು ಶಿಲಾನ್ಯಾಸ

HE-MRO ಬಗ್ಗೆ:HE-MRO ಎಂಬುದು HAL ಮತ್ತು ಸಫ್ರಾನ್‌ನ ಜಂಟಿ ಸಾಹಸೋದ್ಯಮ ಕಂಪನಿಯಾಗಿದ್ದು, ಇದು HAL-ನಿರ್ಮಿತ ಹೆಲಿಕಾಪ್ಟರ್‌ಗಳಲ್ಲಿ ಅಳವಡಿಸಲಾಗಿರುವ Safran TM333 ಮತ್ತು HAL ಶಕ್ತಿ ಎಂಜಿನ್‌ಗಳಿಗೆ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ (MRO) ಸೇವೆಗಳನ್ನು ಒದಗಿಸುತ್ತದೆ. ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸನ್ನದ್ಧತೆಗೆ ಸಹಾಯ ಮಾಡಲು ಸೇವಾ ಸಾಮರ್ಥ್ಯವನ್ನು ನಿರಂತರವಾಗಿ ಸುಧಾರಿಸುವುದು ಇದರ ಗುರಿಯಾಗಿದೆ.

For All Latest Updates

TAGGED:

ABOUT THE AUTHOR

...view details