ಹೈದರಾಬಾದ್/ಬೆಂಗಳೂರು:ಆತ್ಮ ನಿರ್ಭರ್ ಭಾರತದ ಭಾಗವಾಗಿ ವಿಮಾನಗಳ ಖರೀದಿ ಮತ್ತು ಗುತ್ತಿಗೆಗೆ ಹಿಂದುಸ್ತಾನ ಏರೋನಾಟಿಕ್ ಲಿಮಿಟೆಡ್(ಎಚ್ಎಎಲ್) ಮತ್ತು ಪವನ್ ಹ್ಯಾನ್ಸ್ ಲಿಮಿಟೆಡ್(ಪಿಎಚ್ಎಲ್) ಮಧ್ಯೆ ದೀರ್ಘ ಅವಧಿಗೆ ಒಪ್ಪಂದ ಏರ್ಪಟ್ಟಿದೆ. ಹೈದರಾಬಾದ್ನಲ್ಲಿ ನಡೆಯುತ್ತಿರುವ ವಿಂಗ್ಸ್ ಇಂಡಿಯಾ-2022 ಕಾರ್ಯಕ್ರಮದಲ್ಲಿ ಈ ಸಹಕಾರದ ಒಪ್ಪಂದ ನಡೆದಿದೆ. ನಾಗರಿಕ ವಿಮಾನಗಳಾದ ಎಎಲ್ಎಚ್ ಧ್ರುವ್ ಮತ್ತು ಲೈಟ್ ಯುಟಿಲಿಟಿ ಹೆಲಿಕಾಪ್ಟರ್ಗಳನ್ನು ತಲಾ 10 ಖರೀದಿಗೆ ಉಭಯ ಸಂಸ್ಥೆಗಳು ಸಹಿ ಹಾಕಿವೆ. ಇದು ಭಾರತದ ಹೆಲಿಕಾಪ್ಟರ್ ವ್ಯವಹಾರವನ್ನು ಬಲಪಡಿಸಲಿದೆ.
ಹೆಲಿಕಾಪ್ಟರ್ ಖರೀದಿ, ಗುತ್ತಿಗೆಗಾಗಿ HAL- PHL ಮಧ್ಯೆ ಸಹಕಾರ ಒಪ್ಪಂದ - ವಿಮಾನ ಖರೀದಿ- ಗುತ್ತಿಗೆಗೆ ಒಪ್ಪಂದ
ಆತ್ಮ ನಿರ್ಭರ್ ಭಾರತದ ಭಾಗವಾಗಿ ವಿಮಾನಗಳ ಖರೀದಿ ಮತ್ತು ಗುತ್ತಿಗೆಗೆ ಹಿಂದುಸ್ತಾನ ಏರೋನಾಟಿಕ್ ಲಿಮಿಟೆಡ್(ಎಚ್ಎಎಲ್) ಮತ್ತು ಪವನ್ ಹ್ಯಾನ್ಸ್ ಲಿಮಿಟೆಡ್(ಪಿಎಚ್ಎಲ್) ಮಧ್ಯೆ ದೀರ್ಘ ಅವಧಿಗೆ ಒಪ್ಪಂದ ಏರ್ಪಟ್ಟಿದೆ.
ಸಹಕಾರ ಒಪ್ಪಂದ
ಪಿಎಚ್ಎಲ್ ಸಿಎಂಡಿಯಾದ ಸಂಜೀವ್ ರಜ್ದಾನ್, ಎಚ್ಎಎಲ್ನ ಎಸ್ ಅನ್ಬುವೇಲನ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ, ತೆಲಂಗಾಣ ಸಚಿವ ವೇಮುಲ ಪ್ರಶಾಂತ್ ರೆಡ್ಡಿ, ಎಚ್ಎಎಲ್ನ ಆರ್.ಮಾಧವನ್ ಸೇರಿದಂತೆ ಇನ್ನಿತರರಿದ್ದರು.
ಇದನ್ನೂ ಓದಿ:'ನಿಮಗೆ ಅಧಿಕಾರ ಬೇಕಾದ್ರೆ ನನ್ನನ್ನು ಜೈಲಿಗೆ ಹಾಕಿ': ಬಿಜೆಪಿಗೆ ಉದ್ಧವ್ ಠಾಕ್ರೆ ಸವಾಲು