ನವದೆಹಲಿ: ಭಾರತದ ಖ್ಯಾತ ಮಹಿಳಾ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎರಡು ವರ್ಷಗಳ ಕಾಲ ನಿಷೇಧ ಶಿಕ್ಷೆ ಅನುಭವಿಸಬೇಕಿದೆ. ಕಳೆದ ಮಾರ್ಚ್ನಲ್ಲಿ ಇಂಟರ್ನ್ಯಾಷನಲ್ ಜಿಮ್ನಾಸ್ಟ್ ಫೆಡರೇಶನ್ ಈ ಆಟಗಾರ್ತಿಯ ಸ್ಥಾನಮಾನವನ್ನು ಅಮಾನತುಗೊಳಿಸಿತ್ತು. ಅಮಾನತು ಶಿಕ್ಷೆ ವಿವಾಕ್ಕೂ ಎಡೆಮಾಡಿಕೊಟ್ಟಿತ್ತು.
ವಾಡಾದ ನಿಯಮಗಳ ಉಲ್ಲಂಘನೆ:ವಿಶ್ವ ಉದ್ದೀಪನ ಮದ್ದು ತಡೆ ಏಜೆನ್ಸಿ (ವಾಡಾ) ಮಾರ್ಗಸೂಚಿಗಳನ್ವಯ, ಸ್ಪರ್ಧಿಯ ಬಗ್ಗೆ ನಿಖರ ಮಾಹಿತಿ ನೀಡುವ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಅವರನ್ನು ಆಟದಿಂದ ನಿಷೇಧಿಸಲಾಗಿದೆ. ಜಿಮ್ನಾಸ್ಟಿಕ್ ಫೆಡರೇಶನ್ ಆಫ್ ಇಂಡಿಯಾ ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ಈ ವಿಚಾರದಲ್ಲಿ ಮೌನವಹಿಸಿದೆ.