ಮುಂಬೈ(ಮಹಾರಾಷ್ಟ್ರ: ಹಿಜಾಬ್ ಧರಿಸಿ ವ್ಯಾಯಾಮ ಮಾಡಲು ಇಚ್ಛಿಸುವವರಿಗೆ ಇಲ್ಲೊಂದು ಮಹಿಳೆಯರ ತಂಡ ಜಿಮ್ ಓಪನ್ ಮಾಡಿದೆ. ಇಲ್ಲಿ ಮಹಿಳೆಯರಿಗೆ ವ್ಯಾಯಾಮದ ಜೊತೆನೇ ಹಿಜಾಬ್ ಸಂಪ್ರದಾಯಕ್ಕೆ ಬದ್ಧವಾಗಿರಲು ಸಹಾಯವನ್ನೂ ಮಾಡುತ್ತಿದ್ದಾರೆ.
ಹೌದು, ಇಲ್ಲಿನ ಮುಸ್ಲಿಂ ಪ್ರದೇಶವಾದ ಖಡಕ್ನಲ್ಲಿ ಮೂವರು ಮಹಿಳೆಯರು ಒಟ್ಟಾಗಿ ಸೇರಿ ಬಜೆಟ್ ಸ್ನೇಹಿ ಜಿಮ್ ಕೇಂದ್ರವನ್ನು ನಡೆಸುತ್ತಿದ್ದಾರೆ. ಈ ಪ್ರದೇಶದ ಮಹಿಳೆಯರಿಗೆ ತಮ್ಮ ಫಿಟ್ನೆಸ್ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಹಿಜಾಬ್ ಸಂಪ್ರದಾಯಕ್ಕೆ ಬದ್ಧವಾಗಿರಲು ಸಹಾಯ ಮಾಡುವುದು ಈ ಯುವತಿಯರ ಉದ್ದೇಶವಾಗಿದೆ.
ಸಮೀರಾ, ತಸ್ನೀಮ್ ಮತ್ತು ಕಲ್ಯಾಣಿ ಸೇರಿದಂತೆ ಮೂವರು ಮಹಿಳೆಯರು ಜಿಮ್ ಕೇಂದ್ರವನ್ನು ನಡೆಸುತ್ತಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಗೃಹಿಣಿಯರ ಫಿಟ್ನೆಸ್ ಮತ್ತು ಸುಧಾರಣೆಗಾಗಿ ಈ ಜಿಮ್ ತೆರೆಯುವ ಹಿಂದಿನ ಉದ್ದೇಶವಾಗಿದೆ. ಮುಸ್ಲಿಂ ಹೆಚ್ಚಾಗಿರುವ ಪ್ರದೇಶವಾಗಿರುವುದರಿಂದ ಮಹಿಳೆಯರು ಖಾಸಗಿಯಾಗಿರಲು ಬಯಸುತ್ತಾರೆ. ಈ ಜಿಮ್ ಮಹಿಳೆಯರಿಗೆ ಬಜೆಟ್ ಸ್ನೇಹಿವಾಗಿದ್ದು, ಈಗ ಈ ಜಿಮ್ನ ಸದಸ್ಯರ ಸಂಖ್ಯೆ 100 ಕ್ಕಿಂತ ಹೆಚ್ಚಾಗಿದೆ ಎಂಬುದು ಜಿಮ್ ಮಾಲೀಕರ ಮಾತಾಗಿದೆ.