ಪ್ರಯಾಗರಾಜ್:ವಾರಾಣಸಿಯ ಜ್ಞಾನವಾಪಿ ಶೃಂಗಾರ್ ಗೌರಿ ಪ್ರಕರಣದಲ್ಲಿ ಪೂಜೆಗೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಮುಸ್ಲಿಂ ಪಕ್ಷಗಾರರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಾಣಸಿ ಕೋರ್ಟ್ನಲ್ಲಿ ವಿಚಾರಣೆ ನಡೆದು, ಮುಸ್ಲಿಮರ ಅರ್ಜಿ ವಜಾ ಮಾಡಿ ಪೂಜೆಗೆ ಅವಕಾಶ ನೀಡಿ ಆದೇಶಿಸಲಾಗಿತ್ತು. ಇದರ ವಿರುದ್ಧ ಮಸೀದಿ ಹೈಕೋರ್ಟ್ ಮೆಟ್ಟಿಲೇರಿದೆ.
ನವೆಂಬರ್ 29, 30 ರಂದು ವಾರಾಣಸಿ ಕೋರ್ಟ್ನಲ್ಲಿ ಶೃಂಗಾರ್ ಗೌರಿ ಅರ್ಜಿಯ ವಿಚಾರಣೆ ನಡೆದಿತ್ತು. ನ್ಯಾಯಮೂರ್ತಿ ಜೆಜೆ ಮುನೀರ್ ಮುಸ್ಲಿಮರು ಅರ್ಜಿಯನ್ನು ವಜಾ ಮಾಡಿ, ಹಿಂದೂಗಳು ಸಲ್ಲಿಸಿದ ಅರ್ಜಿ ಪುರಸ್ಕರಿಸಿದ್ದರು. ಇದರ ಸಿಂಧುತ್ವ ಪ್ರಶ್ನಿಸಿ ಮಸೀದಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲರ್ಜಿ ಸಲ್ಲಿಸಿದ್ದಾರೆ.