ವಾರಾಣಸಿ:ಇಲ್ಲಿನ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗವು ಸಾರ್ವಜನಿಕ ಗೊಂದಲಕ್ಕೆ ಕಾರಣವಾಗಿದೆ. ಶಿವಲಿಂಗದ ಅಸ್ತಿತ್ವವು ಕೇವಲ ಆಪಾದನೆಯಾಗಿದೆ. ಇದು ಜನರಲ್ಲಿ ತೀವ್ರ ತಿಕ್ಕಾಟ ಮೂಡಿಸಿದೆ ಎಂದು ಜ್ಞಾನವಾಪಿ ಮಸೀದಿ ಸಮಿತಿ ನ್ಯಾಯಾಲಯದ ಮುಂದೆ ವಾದ ಮಂಡಿಸಿದೆ.
ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದು ದೇವರು ಮತ್ತು ಶಿವಲಿಂಗ ಪತ್ತೆಯಾಗಿದ್ದು, ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ 5 ಜನ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ವಿರುದ್ಧವಾಗಿ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಕೋರ್ಟ್, ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಿತ್ತು.
ಮಸೀದಿ ಸಮಿತಿ ಸಲ್ಲಿಸಿದ ಅರ್ಜಿಯ ಮೇಲೆ ಇಂದು ನಡೆದ ವಿಚಾರಣೆಯಲ್ಲಿ, ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬುದು ವಾದವಾಗಿದೆ. ಇದರ ಬಗ್ಗೆ ಯಾವುದೇ ಅಸ್ತಿತ್ವವಿಲ್ಲ. ಶಿವಲಿಂಗ ಎಂದು ಇನ್ನೂ ಸಾಬೀತಾಗಿಲ್ಲ. ಇದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಇದರ ಅಸ್ತಿತ್ವ ಸಾಬೀತಾಗುವವರೆಗೆ ಯಾವುದೇ ಅನುಮತಿಯನ್ನು ನೀಡಬಾರದು ಎಂದು ವಾದಿಸಿದೆ.
30ಕ್ಕೆ ವಿಚಾರಣೆ ಮುಂದೂಡಿಕೆ:ಶಿವಲಿಂಗಕ್ಕೆ ಪೂಜೆ ಮಾಡಲು ಕೋರಿ ಹಿಂದುಪರ ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಬೇಕು ಎಂದು ಕೋರಿ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮೇ 30 ಕ್ಕೆ ಮುಂದೂಡಿದೆ. ವಿಚಾರಣೆಗಳು ಇನ್ನೂ ಮುಗಿಯದ ಕಾರಣ ಮುಂದಿನ ವಿಚಾರಣೆಗೆ ದಿನಾಂಕ ನೀಡಿದೆ.
ಓದಿ:ಆ ಒಂದೇ ಒಂದು ಸೆಲ್ಫಿ... ಐದು ವರ್ಷದಿಂದ ತಲೆ ಮರೆಸಿಕೊಂಡಿದ್ದವ ಸಿಕ್ಕಿ ಬೀಳುವಂತೆ ಮಾಡ್ತು!