ಕರ್ನಾಟಕ

karnataka

ETV Bharat / bharat

ಜ್ಞಾನವಾಪಿ ಮಸೀದಿಯಲ್ಲಿನ ಶಿವಲಿಂಗ ಪೂಜೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಜಾ - ಜ್ಞಾನವಾಪಿ ಮಸೀದಿ ಶಿವಲಿಂಗಕ್ಕೆ ಪೂಜೆಗಾಗಿ ಅರ್ಜಿ

ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಸ್ವಾಮೀಜಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ಕೋರ್ಟ್​ ವಜಾ ಮಾಡಿದೆ.

gyanvapi-case-varanasi
ಸ್ವಾಮೀಜಿ ಸಲ್ಲಿಸಿದ್ದ ಅರ್ಜಿ ವಜಾ

By

Published : Jun 8, 2022, 3:14 PM IST

ವಾರಣಾಸಿ:ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು 5 ಮಂದಿ ಹಿಂದು ಮಹಿಳೆಯರು ವಾರಣಾಸಿ ಕೋರ್ಟ್​ಗೆ​ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಸ್ವಾಮೀಜಿಯೊಬ್ಬರು ಪೂಜೆ ಸಲ್ಲಿಸಲು ತಮಗೂ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಕೋರ್ಟ್​ ವಜಾಗೊಳಿಸಿತು.

ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಎಂಬುವವರು ಜ್ಞಾನವಾಪಿ ಮಸೀದಿಯಲ್ಲಿನ ಶಿವಲಿಂಗಕ್ಕೆ ಧರ್ಮದ ಶಾಸ್ತ್ರದ ಪ್ರಕಾರ ನಿತ್ಯಪೂಜೆ ಮಾಡಬೇಕು. ಹೀಗಾಗಿ ಅವಕಾಶ ನೀಡುವಂತೆ ವಾರಣಾಸಿ ನ್ಯಾಯಾಲಯದ ಮೊರೆ ಹೋಗಿದ್ದರು.

ಮಸೀದಿಯಲ್ಲಿ ಕಂಡುಬಂದ ಶಿವಲಿಂಗ ದರ್ಶನಕ್ಕಾಗಿ ಹಲವು ಸ್ವಾಮೀಜಿಗಳು ಮತ್ತು ಭಕ್ತರು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಶಿವಲಿಂಗದ ಸುತ್ತಮುತ್ತ ಪ್ರವೇಶ ನಿಷೇಧಿಸಲಾಗಿದೆ.

ಇದನ್ನೂ ಓದಿ:ವಿವಾದಾತ್ಮಕ ಹೇಳಿಕೆ: ನೂಪುರ್​ ಶರ್ಮಾ ಪರ ಬ್ಯಾಟಿಂಗ್ ಮಾಡಿದ ಕಂಗನಾ ರಣಾವತ್

ABOUT THE AUTHOR

...view details