ಕರ್ನಾಟಕ

karnataka

ETV Bharat / bharat

ಜ್ಞಾನವಾಪಿ ವಿವಾದ: ಮಸೀದಿ ಸಮಿತಿ ಅರ್ಜಿ ವಿಚಾರಣೆ ಜುಲೈ 4ಕ್ಕೆ ಮುಂದೂಡಿಕೆ

ಸುಪ್ರೀಂಕೋರ್ಟ್​ ನಿರ್ದೇಶನದಂತೆ ವಾರಾಣಸಿ ಜಿಲ್ಲಾ ನ್ಯಾಯಾಲಯ ಜ್ಞಾನವಾಪಿ ಮಸೀದಿ ವಿವಾದದ ಅರ್ಜಿಯನ್ನು ಕೈಗೆತ್ತಿಕೊಂಡಿದ್ದು, ಜುಲೈ 4 ರಂದು ವಿಚಾರಣೆಯನ್ನು ಮುಂದೂಡಿದೆ. ಪ್ರಕರಣದಲ್ಲಿ ಮುಸ್ಲಿಮರ ತಕರಾರು ಅರ್ಜಿಗಳ ವಿಚಾರಣೆಯನ್ನು ಮೊದಲು ನಡೆಸಲು ಕೋರ್ಟ್​ ನಿರ್ಧರಿಸಿದೆ.

gyanvapi-case
ಜ್ಞಾನವಾಪಿ ವಿವಾದ

By

Published : May 30, 2022, 5:33 PM IST

ವಾರಾಣಸಿ (ಉತ್ತರಪ್ರದೇಶ):ಜ್ಞಾನವಾಪಿ ಮಸೀದಿ-ಶೃಂಗಾರ್​ ಗೌರಿ ವಿವಾದ ಕುರಿತು ಸಲ್ಲಿಸಲಾದ ತಕರಾರು ಅರ್ಜಿಗಳ ವಿಚಾರಣೆಯನ್ನು(ಅಂಜುಮನ್​ ಇಂತೆಜಾಮಿಯಾ ಸಮಿತಿ ಸೇರಿದಂತೆ) ವಾರಾಣಸಿ ತ್ವರಿತ ನ್ಯಾಯಾಲಯ ಜುಲೈ 4 ಕ್ಕೆ ಮುಂದೂಡಿದೆ.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದ್ದು, ಪೂಜೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರಿ ಹಿಂದೂ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಮಸೀದಿ ಸಮಿತಿ ಮತ್ತು ಮುಸ್ಲಿಂ ಮುಖಂಡರು ತಕರಾರು ಅರ್ಜಿ ಸಲ್ಲಿಸಿದ್ದು, ಇಂದು ಕೈಗೆತ್ತಿಕೊಂಡ ತ್ವರಿತ ನ್ಯಾಯಾಲಯ ವಿಚಾರಣೆಯನ್ನು ಜುಲೈ 4 ಕ್ಕೆ ಮುಂದೂಡಿತು.

ಜಿಲ್ಲಾ ನ್ಯಾಯಾಧೀಶ ಡಾ.ಅಜಯ್ ಕೃಷ್ಣ ವಿಶ್ವೇಶ ಅವರಿದ್ದ ಪೀಠ, ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿಯನ್ನು ಪ್ರಶ್ನಿಸಿ ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿ ಸಲ್ಲಿಸಿದ ತಕರಾರು ಅರ್ಜಿಯ ವಿಚಾರಣೆಯನ್ನು ಪೂಜಾ ಸ್ಥಳಗಳ ಕಾಯ್ದೆಯಿಂದ ಬೇರ್ಪಡಿಸಲಾಗಿದೆ. ಜುಲೈ 4 ರಂದು ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯಲಿದೆ ಎಂದು ಹಿಂದೂ ಪರ ವಕೀಲರಾದ ವಕೀಲ ವಿಷ್ಣು ಜೈನ್ ತಿಳಿಸಿದರು.

ಈ ಹಿಂದೆ ಜ್ಞಾನವಾಪಿಯಲ್ಲಿ ಶಿವಲಿಂಗ ಪತ್ತೆಯಾದ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​, ಸ್ಥಳದಲ್ಲಿ ಯಥಾಸ್ಥಿತಿ ಕಾಪಾಡಿ ಶಿವಲಿಂಗಕ್ಕೆ ರಕ್ಷಣೆ ನೀಡಲು ಸೂಚಿಸಿತ್ತು. ಅಲ್ಲದೇ, ಆದ್ಯತೆಯ ಮೇರೆಗೆ ಫಿರ್ಯಾದುದಾರರ ಅರ್ಜಿಯ ವಿಚಾರಣೆ ನಡೆಸಲು ವಾರಾಣಸಿ ಕೋರ್ಟ್​ಗೆ ಸೂಚಿಸಿತ್ತು.

ವಾರಾಣಸಿ ಜಿಲ್ಲಾ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಫಾಸ್ಟ್​ ಟ್ರ್ಯಾಕ್​ ಕೋರ್ಟ್​(ತ್ವರಿತ ನ್ಯಾಯಾಲಯ)ಗೆ ವರ್ಗಾಯಿಸಿತ್ತು. ಇದೀಗ ಅರ್ಜಿಯ ವಿಚಾರಣೆಯನ್ನು ನಡೆಸಲು ಮುಂದಾಗಿರುವ ತ್ವರಿತ ನ್ಯಾಯಾಲಯ ಜುಲೈ 4 ಕ್ಕೆ ಮುಂದೂಡಿದೆ.

ಓದಿ:ಆಫ್ಘಾನಿಸ್ತಾನದಲ್ಲಿ JeM, LeT ತರಬೇತಿ ಶಿಬಿರ : UN ವರದಿ

ABOUT THE AUTHOR

...view details