ಹೈದರಾಬಾದ್:ಹುಡುಗಿಯರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿ ಯುವತಿಯರನ್ನು ಫ್ರೆಂಡ್ ಮಾಡಿಕೊಂಡು ಮೋಸ ಮಾಡ್ತಿದ್ದ ವ್ಯಕ್ತಿಯೋರ್ವನನ್ನು ಬಂಧನ ಮಾಡಲಾಗಿದೆ.
ಹೈದರಾಬಾದ್ ಪೊಲೀಸರಿಂದ ವ್ಯಕ್ತಿಯ ಬಂಧನ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸುಮಂತ್ ಮಣಿಕೊಂಡದಲ್ಲಿ ವಾಸವಾಗಿದ್ದ. ಇನ್ಸ್ಟಾಗ್ರಾಂನಲ್ಲಿ ಹುಡುಗಿಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು, ಅನೇಕ ಯುವತಿಯರೊಂದಿಗೆ ಚಾಟ್ ಮಾಡಿದ್ದಾನೆ. ಅವರನ್ನು ಫ್ರೆಂಡ್ ಮಾಡಿಕೊಂಡು ಫೋಟೋ ಸಂಗ್ರಹಿಸಿದ್ದಾನೆ. ಇದಾದ ಬಳಿಕ ಅವರ ಅಶ್ಲೀಲ ಫೋಟೋ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದನಂತೆ.
ಓದಿ: ಪತ್ನಿ-ಪ್ರಿಯಕರನನ್ನು ಕೊಂದ ಪ್ರಕರಣ: ಕೂಡ್ಲಿಗಿ ಠಾಣೆಗೆ ಬಂದು ಶರಣಾದ ಆರೋಪಿ
ಸಂತ್ರಸ್ತೆಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರು ಸುಮಂತ್ನನ್ನು ಬಂಧಿಸಿದ್ದಾರೆ. ಈಗಾಗಲೇ 70 ಯುವತಿಯರಿಗೆ ಆತ ವಂಚನೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈತ ಮೂಲತಃ ವಿಜಯವಾಡದವನು ಎಂದು ಗುರುತಿಸಲಾಗಿದೆ. ಕಳೆದ ಕೆಲ ತಿಂಗಳಿಂದ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯರು ಅಪರಿಚಿತರೊಂದಿಗೆ ಚಾಟ್ ಮಾಡದಂತೆ ಹೈದರಾಬಾದ್ ಸೈಬರ್ ಕ್ರೈಂ ಎಸಿಪಿ ಪ್ರಸಾದ್ ಸಲಹೆ ನೀಡಿದ್ದಾರೆ.