ಗುವಾಹಟಿ(ಅಸ್ಸೋಂ): ಕೆಲವರು ತಮ್ಮಿಷ್ಟದ ಆಸೆಗಳನ್ನು ಈಡೇರಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಅಥವಾ ಕಸರತ್ತು ನಡೆಸುತ್ತಾರೆ. ಇಲ್ಲೊಬ್ಬ ಯುವಕ ತಾನು ಅಂದುಕೊಂಡದನ್ನು ಪಡೆಯಲು ಬರೋಬ್ಬರಿ ಎಂಟು ವರ್ಷಗಳ ಕಾಲ ಕಾದಿದ್ದಾನೆ. ಹೌದು, ಈತ ಎಲ್ಲರಿಗಿಂತಲೂ ವಿಭಿನ್ನವಾದ ಹಾದಿ ತುಳಿದಿದ್ದಾರೆ. ಕಳೆದ ಎಂಟು ವರ್ಷಗಳಿಂದ ತಾನು ಕೂಡಿಟ್ಟಿದ್ದ ನಾಣ್ಯಗಳಿಂದಲೇ 1.5 ಲಕ್ಷ ರೂ. ಸಂಗ್ರಹಿಸಿ, ಹೊಚ್ಚ ಹೊಸ ಸ್ಕೂಟರ್ ತೆಗೆದುಕೊಂಡಿದ್ದಾನೆ.
ಅಸ್ಸೋಂನ ಗುವಾಹಟಿ ನಿವಾಸಿ ಉಪೇನ್ ರಾಯ್ ಒಂದು ರೂಪಾಯಿ, ಎರಡು ರೂಪಾಯಿ, ಐದು ರೂಪಾಯಿ ಮತ್ತು 10 ರೂಪಾಯಿ ನಾಣ್ಯಗಳನ್ನೇ ನೀಡಿ 1.50 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ. ಈ ಹಣವನ್ನ ಜಮಾ ಮಾಡಲು ಸುಮಾರು ಎಂಟು ವರ್ಷಗಳ ಕಾಲ ಅಂದ್ರೆ 2014ರಿಂದ ಶುರುಮಾಡಿದ್ದಾರೆ. ತನ್ನ ಆಸೆಯಂತೆ ಶೋ ರೂಂನವರಿಗೆ ಚಿಲ್ಲರೆ ಹಣ ಉಪೇನ್ ಸ್ಕೂಟರ್ ಖರೀದಿಸಿದ್ದಾರೆ. ಈತ ನೀಡಿರುವ ಚಿಲ್ಲರೆ ಹಣ ಎಣಿಸಲು ಶೋ ರೂಂನವರು ಸರಿಸುಮಾರು 5-6 ಗಂಟೆಗಳ ಕಾಲ ತೆಗೆದುಕೊಂಡಿದ್ದಾರೆ.