ಗುರುಗ್ರಾಮ: ಹರ್ಯಾಣದ ಗುರುಗ್ರಾಮದ ಉದ್ಯೋಗ್ ವಿಹಾರ್ ಹಂತ 1 ರಲ್ಲಿ ಸೋಮವಾರ ಕಟ್ಟಡವೊಂದರ ಭಾಗವನ್ನು ನೆಲಸಮ ಮಾಡುವ ವೇಳೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಸ್ಥಳಕ್ಕೆ ಗುರುಗ್ರಾಮ ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಧಾವಿಸಿದ್ದು, ಸೆ.26ರಿಂದ ಕೆಡವಲಾಗುತ್ತಿದ್ದ ಹಳೆ ಕಟ್ಟಡದ ಗೋಡೆ ಹಾಗೂ ಮೇಲ್ಛಾವಣಿ ಕೆಡವುತ್ತಿದ್ದ ವೇಳೆ ಗೋಡೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ನಿವಾಸಿಗಳಾದ ನಾಲ್ವರು ಕಾರ್ಮಿಕರ ಮೇಲೆ ಬಿದ್ದಿದೆ. ಇದು ಮೂರು ಅಂತಸ್ತಿನ ಎತ್ತರದ ಕಟ್ಟಡವಾಗಿದ್ದು, ಅದರಲ್ಲಿ ಎರಡು ಮಹಡಿಗಳನ್ನು ಕೆಡವಲಾಗಿತ್ತು. ಉಳಿದ ಭಾಗ ಕಾರ್ಮಿಕರ ಮೇಲೆ ಕುಸಿದಿದೆ ಎಂದು ಹೇಳಿದರು.