ಅನಂತ್‌ನಾಗ್ (ಜಮ್ಮು ಮತ್ತು ಕಾಶ್ಮೀರ):ಇಲ್ಲಿನ ಗುಪ್ಕರ್ ಗ್ಯಾಂಗ್ ತಂಡದ ನಾಯಕರು ವಿನಾ ಕಾರಣ 370ನೇ ವಿಧಿಯ ಹೆಸರನ್ನು ಪ್ರಸ್ತಾಪ ಮಾಡುವ ಮೂಲಕ ಕಣಿವೆಯಲ್ಲಿರುವ ಮುಗ್ಧ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಮಾಜಿ ಕೇಂದ್ರ ಸಚಿವ ಶಹನಾವಾಜ್ ಹುಸೇನ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಗುಪ್ಕಾರ್ ಗ್ಯಾಂಗ್ ದೇಶದ್ರೋಹಿ ಚಟುವಟಿಕೆಗೆ ರಾಜಕೀಯ ಪಕ್ಷಗಳ ಕೈವಾಡ; ಬಿಜೆಪಿ ನಾಯಕರ ಆರೋಪ
ಕಾಶ್ಮೀರದ ಮುಗ್ಧ ಜನರಲ್ಲಿ ಗುಪ್ಕರ್ ಗ್ಯಾಂಗ್ ತಂಡ 370ನೇ ವಿಧಿಯ ಹೆಸರಿನಲ್ಲಿ ಮೋಸದ ಬೀಜ ಬಿತ್ತುತ್ತಿದೆ. ಇಲ್ಲಿನ ರಾಜಕಾರಣಿಗಳು 370ನೇ ವಿಧಿಯನ್ನು ರಾಜಕೀಯಗೊಳಿಸುವುದರ ಮೂಲಕ ಅರಾಜಕತೆ ಹುಟ್ಟುಹಾಕುತ್ತಿದ್ದಾರೆ. ಅಲ್ಲದೇ ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸಿ ಅಕ್ರಮ ಆಸ್ತಿ ಗಳಿಕೆಯಲ್ಲಿ ತೊಡಗಿದ್ದಾರೆ ಎಂದು ಹುಸೇನ್ ಆರೋಪ ಮಾಡಿದ್ದಾರೆ.
ಕಣಿವೆಯಲ್ಲಿ ಪ್ರತಿಯೊಬ್ಬ ಯುವಕ ಸತ್ತಾಗ ನನಗೆ ಬೇಸರವಾಗುತ್ತದೆ. ಲೀಲಾಜಾಲವಾಗಿ ಗನ್ ಬದಲಾಗಿ ಇಲ್ಲಿ ಪೆನ್ ಸಿಗಬೇಕು. ಇಲ್ಲಿನ ಯುವಕರ ಕೈಯಲ್ಲಿ ಪೆನ್ನನ್ನು ನೋಡಲು ಬಿಜೆಪಿ ಬಯಸಿದೆ. ಕಣಿವೆಯಲ್ಲಿ ಸಾವು-ನೋವುಗಳಿಗೆ ಮೂಲ ಕಾರಣವೇ ಗುಪ್ಕರ್ ಗ್ಯಾಂಗ್. ಇದನ್ನು ಮಟ್ಟಹಾಕುವುದೇ ಬಿಜೆಪಿಯ ಉದ್ದೇಶವಾಗಿದೆ ಎಂದು ಶಹನವಾಜ್ ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಶಹನಾವಾಜ್ ಹುಸೇನ್ ರಾಜಕೀಯ ಪಕ್ಷಗಳಾದ ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಸೇರಿದಂತೆ ಪ್ರತ್ಯೇಕತಾ ಸಂಘಟನೆಗಳು ಯುವಕರ ಕೈಯಲ್ಲಿ ಬಂದೂಕುಗಳನ್ನು ನೀಡಿ ಮೂಢರನ್ನಾಗಿಸಲು ಬಯಸುತ್ತಿವೆ. ಇವರ ಕುಕೃತ್ಯದ ಉದ್ದೇಶವನ್ನು ಅರಿತಕೊಳ್ಳದ ಜಮ್ಮು ಮತ್ತು ಕಾಶ್ಮೀರದ ಯುವ ಸಮೂದಾಯ ಅವರ ಹೇಳಿದ ಹಾಗೆ ಕೇಳುವ ಗೊಂಬೆಗಳಾಗಿದ್ದಾರೆ. ಇದನ್ನು ಕಾಶ್ಮೀರಿ ಬಡ ಜನರು ಅರ್ಥೈಸಿಕೊಳ್ಳಬೇಕು.
ಇದನ್ನೂ ಓದಿ:ಆರ್ಟಿಕಲ್ 370 ಪುನಾಸ್ಥಾಪನೆಗೆ ಒಂದಾದ ಶತ್ರು ಪಕ್ಷಗಳು: ಮುಫ್ತಿ-ಫಾರೂಕ್ ಮೈತ್ರಿಕೂಟ ಘೋಷಣೆ!
ಕಣಿವೆಯಲ್ಲಿನ ಯುವಜನರು ಉಗ್ರಗಾಮಿ ಹಾದಿಯನ್ನು ತ್ಯಜಿಸಿ ಪೆನ್ನು ಹಿಡಯಬೇಕು. ತಮ್ಮ ಕೈಯಿಂದಲೇ ತಮ್ಮ ಹಣೆಬರಹವನ್ನು ಬರೆದುಕೊಳ್ಳಬೇಕು. ಇದು ಬಿಜೆಪಿಯ ಧ್ಯೇಯವಾಗಿದೆ ಎಂದಿರುವ ಶಹನವಾಜ್, ಎಲ್ಲಾ ಧರ್ಮದ ಜನರನ್ನು ಒಟ್ಟಿಗೆ ಕರೆದೊಯ್ಯುವ ಏಕೈಕ ಪಕ್ಷವೆಂದರೆ ಅದು ಬಿಜೆಪಿ ಪಕ್ಷ ಎಂದು ತಮ್ಮ ಪಕ್ಷದ ಸಾಧನೆ ಹಾಗೂ ಉದ್ದೇಶವನ್ನು ತಿಳಿಸಿದ್ದಾರೆ.