ಕರ್ನಾಟಕ

karnataka

ETV Bharat / bharat

ಗುಪ್ಕಾರ್ ಒಕ್ಕೂಟ: ಜಮ್ಮು ಕಾಶ್ಮೀರದಲ್ಲಿ ಮುನಿಸು ಬಿಟ್ಟು ಒಟ್ಟಾದ ಪ್ರಾದೇಶಿಕ ಪಕ್ಷಗಳು - ಗುಪ್ಕಾರ್ ಒಕ್ಕೂಟ

ಪ್ರತ್ಯೇಕತಾವಾದ, ಜನಪ್ರಿಯ ಮನಸ್ಥಿತಿ ಮತ್ತು ಭಾರತ ಪರ ರಾಜಕೀಯಗಳೆಲ್ಲವೂ ಕಳೆಗುಂದಿದ್ದು, ಈ ಎಲ್ಲ ಶಕ್ತಿಯೂ ಸೇರಿ ಈಗ ಗುಪ್ಕರ್ ಗ್ಯಾಂಗ್‌ ಎಂದು ಬಿಜೆಪಿ ಕರೆದಿರುವ ಶಕ್ತಿಯಾಗಿ ಹೊರಹೊಮ್ಮಿದೆ. ಇದು ಎಲ್ಲ ಪ್ರಮುಖ ಪ್ರಾದೇಶಿಕ ರಾಜಕೀಯ ಸಮೂಹಗಳ ಒಕ್ಕೂಟವಾಗಿದೆ. ಜಮ್ಮು ಕಾಶ್ಮೀರದಲ್ಲಿ ಪೀಪಲ್ಸ್ ಅಲಾಯನ್ಸ್ ಆಫ್ ಗುಪ್ಕಾರ್ ಡಿಕ್ಲರೇಶನ್ (ಪಿಎಜಿಡಿ) ಎಂಬುದು ಪ್ರಮುಖ ಪ್ರಾದೇಶಿಕ ಪಕ್ಷಗಳು ರೂಪಿಸಿದ ಗುಂಪಾಗಿದ್ದು, ಭಾರತೀಯ ಸಂಸತ್ತು ಆಗಸ್ಟ್‌ 5 ರಂದು 370ನೇ ವಿಧಿಯನ್ನು ರದ್ದುಗೊಳಿಸಿದ್ದನ್ನು ವಿರೋಧಿಸುವುದೇ ಇದರ ಗುರಿಯಾಗಿದೆ.

Gupkar Alliance
ಗುಪ್ಕಾರ್ ಒಕ್ಕೂಟ

By

Published : Nov 19, 2020, 3:19 PM IST

ಗುಪ್ಕಾರ್ ಒಕ್ಕೂಟದ ಪ್ರಮುಖ ಪಕ್ಷಗಳು ಈ ಹಿಂದೆ ಒಂದಾದ ಮೇಲೆ ಒಂದರಂತೆ ಬಿಜೆಪಿ ಜೊತೆಗೆ ಕೈಜೋಡಿಸಿದ್ದವು. ಜಮ್ಮು ಕಾಶ್ಮೀರ ವಿಧಾನಸಭೆಗೆ ಪ್ರತ್ಯೇಕವಾಗಿ ಸ್ಫರ್ಧಿಸಿದ ನಂತರದಲ್ಲಿ ಈ ಪಕ್ಷಗಳು ಜೊತೆ ಸೇರಿದ್ದವು. ಈ ಪ್ರದೇಶದಲ್ಲಿ ಅಬ್ದುಲ್ಲಾ ಕುಟುಂಬದ ನ್ಯಾಷನಲ್‌ ಕಾನ್ಫರೆನ್ಸ್‌ ಮೊದಲ ಬಾರಿಗೆ ಬಿಜೆಪಿ ಜೊತೆಗೆ ಸೇರಿಕೊಂಡಿತ್ತು. ವಾಜಪೇಯಿ ಕಾಲದಲ್ಲಿ ಎನ್‌ಡಿಎ ಭಾಗವಾಗಿತ್ತು. ನಂತರ, ಮುಫ್ತಿ ಕುಟುಂಬದ ಪಿಡಿಪಿ ಕೂಡ ಮೋದಿ ನೇತೃತ್ವದ ಎನ್‌ಡಿಎ ಜೊತೆಗೆ ಕೈ ಜೋಡಿಸಿ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸಿತು. ಪರಸ್ಪರರನ್ನು ಸೋಲಿಸಲು ಎನ್‌ಸಿ ಮತ್ತು ಪಿಡಿಪಿ ಎರಡೂ ಬಿಜೆಪಿ ಬೆಂಬಲವನ್ನು ಪಡೆದಿದ್ದವು. ಈಗ ಇವೆರಡೂ, ತಮ್ಮ ಅಸ್ತಿತ್ವಕ್ಕಾಗಿ ಅದೇ ಪಕ್ಷದ ವಿರುದ್ಧ ಒಟ್ಟಾಗಿವೆ.

ಇದೇ ಗುಪ್ಕಾರ್ ಗ್ಯಾಂಗ್‌ನ ಪಕ್ಷಗಳ ಜೊತೆಗೆ ಸೇರಿಕೊಂಡು ಬಿಜೆಪಿ ತನ್ನ ಅಸ್ತಿತ್ವವನ್ನು ಬೆಳೆಸಿಕೊಂಡಿತು. ಜಮ್ಮು ಕಾಶ್ಮೀರದ ರಾಜ್ಯದ ಪ್ರಮುಖ ಕ್ಷೇತ್ರಗಳಿರುವ ಕಾಶ್ಮೀರದಲ್ಲಿನ ಹತ್ತು ಜಿಲ್ಲೆಗಳಲ್ಲಿ ಈ ಹಿಂದೆ ಬಿಜೆಪಿ ಅಸ್ತಿತ್ವವೇ ಇರಲಿಲ್ಲ. ಆದರೆ, ಜಮ್ಮು ಜನರು ಬಿಜೆಪಿ ಜೊತೆಗೆ ಮತ್ತು ಇತರ ರಾಜಕೀಯ ಪಕ್ಷಗಳ ಜೊತೆಗೆ ನಿರ್ಲಿಪ್ತ ಮನೋಭಾವದಲ್ಲಿದ್ದಾರೆ.

ರಾಜ್ಯದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವವರೆಗೂ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಸ್ಥಿತಿ ಉತ್ತಮವಾಗಿಯೇ ಇತ್ತು. ಅಷ್ಟೇ ಅಲ್ಲ, ನಂತರ ಮಾಜಿ ಸಿಎಂ ಮೆಹಬೂಬಾ ಮುಫ್ತಿಯನ್ನು ಜೈಲಿನಿಂದ ಬಿಡುಗಡೆ ಮಾಡುವವರೆಗೂ ಪರಿಸ್ಥಿತಿ ಬದಲಾಗಿರಲಿಲ್ಲ. ಶಾಂತವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲ ಮನೋಜ್‌ ಸಿನ್ಹಾ ಅಡಿ ಸರ್ಕಾರ ಬಯಸಿದಂತೆಯೇ ಎಲ್ಲವೂ ನಡೆಯುತ್ತಿತ್ತು. ಹೊಸ ಬೆಳವಣಿಗೆಗಳ ಮಧ್ಯೆ, ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸುವ ಕೆಲಸ ಮಾತ್ರ ಮನೋಜ್‌ ಸಿನ್ಹಾರಿಂದ ಆಗಿರಲಿಲ್ಲ. ಆಗಸ್ಟ್‌ 5 ರಂದು ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರದಲ್ಲಿ ರಾಜಕೀಯ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ವಲಯದಲ್ಲಿ ರಾಜಕೀಯ ಚಟುವಟಿಕೆಯನ್ನು ಮರು ಆರಂಭಿಸುವ ಉದ್ದೇಶಕ್ಕೆಂದೇ ಸಿನ್ಹಾ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. ಉಮರ್‌ ಮತ್ತು ಅವರ ತಂದೆ ಫಾರೂಕ್ ಅಬ್ದುಲ್ಲಾರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದು, ಜನರಿಗೆ ಯಾವ ವ್ಯತ್ಯಾಸವೂ ಕಂಡುಬರಲಿಲ್ಲ. ಅವರು ಬಿಡುಗಡೆಯಾದ ನಂತರ ಕೇವಲ ಸಣ್ಣ ಪುಟ್ಟ ಬೇಡಿಕೆಗಳಾದ 4ಜಿ ನೆಟ್‌ವರ್ಕ್‌ ಅನ್ನು ಮರುಸ್ಥಾಪಿಸುವಂತಹದ್ದನ್ನಷ್ಟೇ ಅವರು ಮುಂದಿಟ್ಟಿದ್ದರು. ಅಬ್ದುಲ್ಲಾ ಕುಟುಂಬ ಪ್ರತಿಭಟನೆ ಮಾಡದಂತೆ ಮನೋಜ್‌ ಸಿನ್ಹಾ ನಿಯಂತ್ರಣ ಮಾಡಿದ್ದು, ದೆಹಲಿ ನಾಯಕತ್ವಕ್ಕೆ ಮೆಚ್ಚುಗೆಯಾಗಿತ್ತು. ಅಷ್ಟೇ ಅಲ್ಲ, ಅದರಿಂದ ಹೊಸದಾಗಿ ರೂಪುಗೊಂಡ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳನ್ನು ಮಾಡಲು ಪ್ರೋತ್ಸಾಹ ನೀಡಿತು.

ಬಿಜೆಪಿ ಮಾಡಿದ ಕೆಲವು ತಪ್ಪು ಲೆಕ್ಕಾಚಾರದಿಂದಾಗಿ ಕೆಲವು ಬೆಳವಣಿಗೆಗಳು ನಡೆದವು. ಇದೇ ಕಾರಣದಿಂದ, ಗುಪ್ಕಾರ್ ಒಕ್ಕೂಟದ ಬಗ್ಗೆ ಬಿಜೆಪಿ ಪ್ರಮುಖ ನಾಯಕರಾದ ಅಮಿತ್‌ ಶಾ, ಜಿತೇಂದ್ರ ಸಿಂಗ್‌ ಹಾಗೂ ಸಂಬಿತ್‌ ಪಾತ್ರ ಸೇರಿದಂತೆ ಹಲವರು ಈ ಕುರಿತು ತಮ್ಮ ಟೀಕೆಯನ್ನು ವ್ಯಕ್ತಪಡಿಸಿದರು.

ಮೆಹಬೂಬಾ ಮುಫ್ತಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಮಾಡಿದ ಹೇಳಿಕೆಯಲ್ಲಿ ರಾಜಕೀಯ ಪರಿಸ್ಥಿತಿ ಬದಲಾವಣೆಯಾಗುವ ಮುನ್ಸೂಚನೆ ಸಿಕ್ಕಿತ್ತು. ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಹಾಗೂ 370ನೇ ವಿಧಿಯನ್ನು ತೆಗೆದುಹಾಕುವವರೆಗೆ ಕೆಂಪು ತ್ರಿವರ್ಣ ಧ್ವಜವನ್ನು ಮಾತ್ರ ಹಾರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇದರಿಂದಾಗಿ, ಎನ್‌ಡಿಎ ಬೇರುಮಟ್ಟದ ಚುನಾವಣೆಗಳನ್ನು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಸಲು ಪೂರಕವಾಯಿತು. ಮೊದಲಿಗೆ ಈ ಪಕ್ಷಗಳು ಚುನಾವಣೆಯಿಂದ ಹಿಂದೆ ಸರಿಯುತ್ತವೆ ಹಾಗೂ ಇದರಿಂದಾಗಿ, ಗ್ರಾಮ ಮತ್ತು ವಲಯ ಮಟ್ಟದ ಇಡೀ ರಾಜಕೀಯ ಕ್ಷೇತ್ರದಲ್ಲಿನಾವು ಮಾತ್ರ ಉಳಿದುಕೊಳ್ಳುತ್ತೇವೆ ಎಂದು ಬಿಜೆಪಿ ಭಾವಿಸಿತು. ಕೇಂದ್ರಾಡಳಿತ ಪ್ರದೇಶದ ಶಾಸಕಾಂಗವನ್ನು ಹಲ್ಲಿಲ್ಲದ ಹಾವಿನಂತೆ ಮಾಡಲು ಡಿಡಿಸಿಗೆ (ಜಿಲ್ಲಾ ಅಭಿವೃದ್ದಿ ಸಮಿತಿಗಳು) ತಿದ್ದುಪಡಿಯನ್ನು ತರಲಾಗಿದೆ. ಎನ್‌ಸಿ ಮತ್ತು ಪಿಡಿಪಿ ನಾಯಕತ್ವ ಮಾತ್ರ ಶಾಸಕಾಂಗದ ಭಾಗವಾಗಿರುತ್ತದೆ ಎಂದು ಬಿಜೆಪಿ ಭಾವಿಸಿತು. ವಿಧಾನಸಭೆ ಚುನಾವಣೆಯನ್ನು ಯಾವಾಗ ನಡೆಸಿದರೂ, ಇಡೀ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಬೇರುಮಟ್ಟದಲ್ಲಿ ತಾವು ಪ್ರತಿನಿಧಿಸಬಹುದು ಎಂದು ಬಿಜೆಪಿ ಭಾವಿಸಿತು. ಬಿಜೆಪಿಗೆ ಅಚ್ಚರಿಯಾಗುವಂತೆ, ಗುಪ್ಕಾರ್ ಒಕ್ಕೂಟವು ಅಚ್ಚರಿಯ ನಡೆ ಇಟ್ಟಿತು. ಬಿಜೆಪಿ ವಿರುದ್ದ ಚುನಾವಣೆಗಳಿಗೆ ಜಂಟಿಯಾಗಿ ಸ್ಫರ್ಧಿಸಲು ನಿರ್ಧರಿಸಿತು.

ಇದರಿಂದಾಗಿ ಬಿಜೆಪಿ ಸಿಟ್ಟಿಗೆದ್ದಿತು. ಇಡೀ ರಾಜಕೀಯ ಪ್ರದೇಶವನ್ನೇ ಗುಪ್ಕಾರ್ ಒಕ್ಕೂಟ ಆವರಿಸಿಕೊಂಡಿತು. ಮುಖ್ಯವಾಹಿನಿಯ ರಾಜಕಾರಣವಾಗಲೀ, ಪ್ರತ್ಯೇಕತಾವಾದವಾಗಲೀ ಅಥವಾ ಜನರಿಗೆ ಪ್ರಿಯವಾಗುವ ನಿಲುವುಗಳಲ್ಲಾಗಲೀ ಗುಪ್ಕಾರ್ ಒಕ್ಕೂಟ ವ್ಯಾಪಿಸಿಕೊಂಡಿತು. ಇದು ಹುರಿಯತ್‌ ಹಾಗೂ ಕಣಿವೆ ರಾಜಕೀಯವನ್ನೂ ಆವರಿಸಿಕೊಂಡಿತು.

ಪ್ರತ್ಯೇಕತಾವಾದದ ಪ್ರಮುಖ ವ್ಯಕ್ತಿ ಮತ್ತು ಹುರಿಯತ್‌ನ ವಿವಿಧ ಅಂಗಗಳ ಮುಖ್ಯಸ್ಥ ಮಸ್ರತ್‌ ಅಲಂ ಭಟ್‌ ಬಿಡುಗಡೆಯೂ ಶೀಘ್ರದಲ್ಲೇ ನಡೆಯಲಿದೆ. ಭಟ್‌ ಬಿಡುಗಡೆಯಿಂದ ಬಿಜೆಪಿಗೆ ಅನುಕೂಲವಾಗಲಿದೆಯೇ? ಅವರ ಬಿಡುಗಡೆಯನ್ನು ಬಿಜೆಪಿ ಹೇಗೆ ಬಳಸಿಕೊಳ್ಳಲಿದೆ ಎಂಬುದು ಅತ್ಯಂತ ಆಸಕ್ತಿಕರ ಬೆಳವಣಿಗೆಯಾಗಿದೆ. ಗುಪ್ಕಾರ್ ಒಕ್ಕೂಟದ ಅಜೆಂಡಾದಿಂದ ಜನರನ್ನು ವಿಮುಖಗೊಳಿಸಲು ಭಟ್ ಬಿಡುಗಡೆಯನ್ನು ಸರ್ಕಾರ ಬಳಸಿಕೊಳ್ಳುವ ಸಾಧ್ಯತೆ ಇದೆ.

ಬಿಜೆಪಿಯ ಕ್ಯಾಂಪೇನ್‌ಗೆ ಈಗಾಗಲೇ ಕಾಂಗ್ರೆಸ್‌ ಸಿಲುಕಿದಂತೆ ಕಂಡುಬರುತ್ತಿದೆ. ಗುಪ್ಕಾರ್‌ ಗ್ಯಾಂಗ್‌ ಅನ್ನು ಬಿಜೆಪಿ ಈಗಾಗಲೇ ರಾಷ್ಟ್ರವಿರೋಧಿ ಎಂದು ಕರೆದಿದ್ದು, ಒಕ್ಕೂಟದಿಂದ ಹಿಂದೆ ಸರಿಯುವ ನಿರ್ಧಾರವನ್ನು ಕಾಂಗ್ರೆಸ್‌ ನಾಯಕತ್ವ ಮಾಡಿದೆ. ಆದರೆ, ಪ್ರಾದೇಶಿಕ ರಾಜಕೀಯ ಪಕ್ಷಗಳು ಈ ಕುರಿತು ತಲೆಕೆಡಿಸಿಕೊಂಡಂತಿಲ್ಲ.

ಬಿಲಾಲ್‌ ಭಟ್‌, ಈಟಿವಿ ಭಾರತ

ABOUT THE AUTHOR

...view details