ಜಲಂಧರ್:ಇಲ್ಲಿನಗುರುನಾನಕ್ಪುರ ಪ್ರದೇಶದಲ್ಲಿ ನಡೆದ ಗುಂಡಿನ ಸದ್ದು ಜಲಂಧರ್ ಜಿಲ್ಲೆಯ ಗುರುನಾನಕ್ಪುರ ಪ್ರದೇಶದ ಸತ್ನಾಮ್ ನಗರದಲ್ಲಿ ಕೇಳಿಬಂದಿದೆ. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ವೃದ್ಧೆ ಕುಲ್ಜಿತ್ ಕೌರ್ ಎಂಬುವವರು ಗಾಯಗೊಂಡಿದ್ದಾರೆ.
ಗುರುನಾನಕ್ಪುರದಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ರಾತ್ರಿ 9 ಗಂಟೆ ವೇಳೆಗೆ ಮಾಹಿತಿ ಸಿಕ್ಕಿದ ನಂತರ ಸ್ಥಳಕ್ಕೆ ಎಸಿಪಿ ನಿರ್ಮಲ್ ಸಿಂಗ್ ಅವರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆ ಪ್ರತ್ಯಕ್ಷದರ್ಶಿಯಾದ ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಕುಲ್‌ದೀಪ್ ಸಿಂಗ್ ಎಂಬುವವರು ಮಾಹಿತಿ ನೀಡಿದ್ದು, ವಾಹನ ನಿಲುಗಡೆ ವಿಚಾರವಾಗಿ ಕೆಲವು ಜನರ ನಡುವೆ ವಾಗ್ವಾದ ನಡೆದು ನಂತರ ಅದು ಜಗಳಕ್ಕೆ ತಿರುಗಿದೆ.