ಕರ್ನಾಟಕ

karnataka

ETV Bharat / bharat

ಗಲ್ಫ್​​ನಿಂದ ಬಂದ ಮಹಿಳೆ ಅಪಹರಿಸಿದ ದುಷ್ಕರ್ಮಿಗಳು.. ಕಾರಣ ಕೇಳಿದ್ರೆ..? - ಕೇರಳದಲ್ಲಿ ಅಪಹರಣ ಪ್ರಕರಣ

ಕೇರಳ ರಾಜ್ಯದ ಮನ್ನಾರ್‌ನಲ್ಲಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಯುವತಿಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಅಪಹರಣಗಾರರು ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಗಲ್ಫ್​​ನಿಂದ ಬಂದ ಮಹಿಳೆ ಅಪಹರಿಸಿದ ದುಷ್ಕರ್ಮಿಗಳು
Gulf Returnee Woman Abducted From Home In Kerala

By

Published : Feb 22, 2021, 1:50 PM IST

ಆಲಪ್ಪುಳ( ಕೇರಳ): ರಾಜ್ಯದ ಮನ್ನಾರ್‌ನಲ್ಲಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಯುವತಿಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ಅಪಹರಿಸಿದವರು ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಅರಬ್​​ ರಾಷ್ಟ್ರದಿಂದ ಭಾರತಕ್ಕೆ ಬಂದಿರುವ ಈ ಮಹಿಳೆ ಬಳಿ ಮೊದಲು ಚಿನ್ನಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದೇ ವೇಳೆ, ಮಹಿಳೆ ಬಳಿ ಚಿನ್ನ ಇಲ್ಲ ಎಂದಿದ್ದಕ್ಕೆ ಮೊದಲು ಬಿಟ್ಟು ಕಳುಹಿಸಿದ್ದಾರೆ. ಆದರೆ, ಇಂದು ನಸುಕಿನ ಜಾವ ಆಕೆ ಇದ್ದ ಮನೆಗೆ ದಾಳಿ ಮಾಡಿದ ದುಷ್ಕರ್ಮಿಗಳು ಮಹಿಳೆಯನ್ನು ಅಪಹರಿಸಿದ್ದಾರೆ ಎಂದು ಆಕೆಯ ಸಂಬಂಧಿಗಳು ತಿಳಿಸಿದ್ದಾರೆ.

ಓದಿ: ಪುದುಚೇರಿ ಸಿಎಂ ವಿ. ನಾರಾಯಣಸ್ವಾಮಿ ರಾಜೀನಾಮೆ; ಅಧಿಕಾರ ಕಳೆದುಕೊಂಡ ಕಾಂಗ್ರೆಸ್

ಅಪಹರಣಕಾರರು ಮಲಪ್ಪುರಂ ಜಿಲ್ಲೆಯ ಕೊಡುವಳ್ಳಿಗೆ ಸೇರಿದವರು ಎಂಬುದು ಮಹಿಳೆಯ ಪತಿ ಅನುಮಾನವಾಗಿದೆ. ಮನ್ನಾರ್ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಅಪಹರಣಕಾರರನ್ನು ಕಂಡು ಹಿಡಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಅಪಹರಣಕ್ಕೊಳಗಾದ ಮಹಿಳೆ ಕುರುತಿಕಾಡು ಮನ್ನಾರ್ ನಿವಾಸಿಯಾಗಿದ್ದು, ಅವರು ಫೆ.19 ರಂದು ದುಬೈನಿಂದ ಸ್ವದೇಶಕ್ಕೆ ಮರಳಿದ್ದರು.

ABOUT THE AUTHOR

...view details