ಕರ್ನಾಟಕ

karnataka

ETV Bharat / bharat

ಗುಜರಾತ್​ ವಿಧಾನಸಭೆ ಚುನಾವಣೆ: 93 ಕ್ಷೇತ್ರಗಳಿಗೆ 2ನೇ ಹಂತದ ಮತದಾನ - Gujurat Assembly Election

ಗುಜರಾತ್​ ವಿಧಾನಸಭೆ ಚುನಾವಣೆಯ 93 ಕ್ಷೇತ್ರಗಳಿಗೆ ಇಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್​ ಶಾ ಅವರು ಭಾಗಿಯಾಗಲಿದ್ದಾರೆ.

gujurat-assembly-poll
ಗುಜರಾತ್​ ವಿಧಾನಸಭೆ ಚುನಾವಣೆ

By

Published : Dec 5, 2022, 7:01 AM IST

Updated : Dec 5, 2022, 7:39 AM IST

ಅಹಮದಾಬಾದ್​(ಗುಜರಾತ್​):ತೀವ್ರ ಕುತೂಹಲ ಮೂಡಿಸಿರುವ ಗುಜರಾತ್​ ವಿಧಾನಸಭೆ ಚುನಾವಣೆಯ 2ನೇ ಮತ್ತು ಕೊನೆಯ ಹಂತದ ಮತದಾನ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. 14 ಜಿಲ್ಲೆಗಳ 93 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

89 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಶೇ.60 ರಷ್ಟು ಮಾತ್ರ ಮತದಾನವಾಗಿತ್ತು. ಇದು ಕಳೆದ ಚುನಾವಣೆಗಿಂತಲೂ ಕಡಿಮೆ ಪ್ರಮಾಣವಾಗಿತ್ತು. ಇಂದಿನ ಚುನಾವಣೆಯಲ್ಲಿ ಮತದಾರರು ಎಷ್ಟರಮಟ್ಟಿಗೆ ಪಾಲ್ಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಮೊದಲ ಹಂತದ ಮತದಾನದಂದು ಪ್ರಧಾನಿ ನರೇಂದ್ರ ಮೋದಿ ಅವರು 2ನೇ ಹಂತದ ಮತಕ್ಷೇತ್ರಗಳಲ್ಲಿ 54 ಕಿಲೋ ಮೀಟರ್ ಉದ್ದದ ಭರ್ಜರಿ ರೋಡ್​ ಶೋ ನಡೆಸಿ ಸಂಚಲನ ಉಂಟು ಮಾಡಿದ್ದರು. ಇಷ್ಟು ಉದ್ದಕ್ಕೂ ರಸ್ತೆಗಳ ಇಕ್ಕೆಲಗಳಲ್ಲಿ 9 ಲಕ್ಷಕ್ಕೂ ಅಧಿಕ ಜನರು ಸೇರಿದ್ದು ದಾಖಲೆಯಾಗಿತ್ತು. ಇದು ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎಂದೇ ಅಂದಾಜಿಸಲಾಗಿದೆ.

93 ಸೀಟುಗಳಲ್ಲಿ ಬಿಜೆಪಿ, ಕಾಂಗ್ರೆಸ್​, ಆಪ್​ ಸೇರಿದಂತೆ 61 ಪಕ್ಷಗಳ 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 285 ಸ್ವತಂತ್ರ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಕಳೆದ ಸಲ ಇಷ್ಟು ಕ್ಷೇತ್ರಗಳಲ್ಲಿ 51 ಸ್ಥಾನಗಳನ್ನು ಬಿಜೆಪಿ, 39 ಕಾಂಗ್ರೆಸ್​, 3 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಮತದಾನದಲ್ಲಿ ಪ್ರಧಾನಿ ಮೋದಿ, ಶಾ:ಇಂದಿನ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್​ನ ಸಾಬರಮತಿ ಕ್ಷೇತ್ರದ ರಾಣಿಪ್​ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಗೃಹ ಸಚಿವ ಅಮಿತ್​ ಶಾ ಅವರೂ ಮತದಾನದಲ್ಲಿ ಭಾಗಿಯಾಗಲಿದ್ದು, ನಾರನ್​ಪುರ ಬೂತ್​ನಲ್ಲಿ ಅವರು ಮತದಾನ ಮಾಡಲಿದ್ದಾರೆ.

1 ಲೋಕಸಭೆ, 7 ವಿಧಾನಸಭೆಗೆ ಉಪಸಮರ:ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭೆಯ ಒಂದು ಕ್ಷೇತ್ರಕ್ಕೆ ಮತ್ತು ಬಿಹಾರ, ಛತ್ತೀಸ್‌ಗಢ, ಒಡಿಶಾ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಆರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಗುಜರಾತ್​ ಸೇರಿದಂತೆ ಈ ಎಲ್ಲಾ ಕ್ಷೇತ್ರಗಳ ಫಲಿತಾಂಶವು ಡಿಸೆಂಬರ್​ 8 ರಂದು ಹೊರಬೀಳಲಿದೆ.

ಓದಿ:ಮತದಾನದ ಹೊತ್ತಲ್ಲೇ ಗುಜರಾತ್​ನ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಬಂಧನ

Last Updated : Dec 5, 2022, 7:39 AM IST

ABOUT THE AUTHOR

...view details