ಕರ್ನಾಟಕ

karnataka

ETV Bharat / bharat

ಅಮೆರಿಕ ಭಕ್ತರೊಬ್ಬರ ಕಾಣಿಕೆಯಿಂದ 'ಡಾಲರ್ ಟೆಂಪಲ್' ಆಯ್ತು ವರದಾಯಿನಿ ಮಾತೆಯ ಗುಡಿ - ಗುಜರಾತ್​ನಲ್ಲಿ ನವರಾತ್ರಿ ಆಚರಣೆ

ಅಮೆರಿಕ ಮೂಲದ ಭಕ್ತರೊಬ್ಬರು ನೀಡಿದ 11,500 ಡಾಲರ್ ಹಣದಿಂದ ವರದಾಯಿನಿ ಮಾತೆಯನ್ನು ಅಲಂಕರಿಸಲಾಗಿದೆ.

Gujarat's Vardayini Mata temple became dollar temple
Gujarat's Vardayini Mata temple became dollar temple

By

Published : Feb 17, 2022, 1:32 PM IST

ಗಾಂಧಿನಗರ (ಗುಜರಾತ್​): ವಿಶ್ವವಿಖ್ಯಾತ ವರದಾಯಿನಿ ಮಾತಾ ದೇವಸ್ಥಾನ ಗಾಂಧಿನಗರದ ರೂಪಾಲ್ ಗ್ರಾಮದಲ್ಲಿದೆ. ನವರಾತ್ರಿಯ 9ನೇ ದಿನದಂದು ಇಲ್ಲಿ ಪರಿಷೆ ನಡೆಯುತ್ತಿದ್ದು, ಇಡೀ ಗ್ರಾಮವೇ ಭಕ್ತಿಯಲ್ಲಿ ಮುಳುಗಿದೆ. ಅಮೆರಿಕ ಮೂಲದ ಭಕ್ತರೊಬ್ಬರು ಬುಧವಾರ ದೇವಸ್ಥಾನಕ್ಕೆ 11,500 ಡಾಲರ್​ (ಸುಮಾರು 8 ಲಕ್ಷ ರೂ) ಹಣವನ್ನು ಕಾಣಿಕೆಯಾಗಿ ಕಳುಹಿಸಿದ್ದಾರೆ.

ಈ ಹಣದಿಂದ ದೇವಸ್ಥಾನದ ಟ್ರಸ್ಟಿಗಳು ಹಾಗೂ ಉಸ್ತುವಾರಿಗಳು ವರದಾಯಿನಿ ಮಾತೆಯನ್ನು ಅಲಂಕರಿಸಿದ್ದಾರೆ. ದಾನ ನೀಡಿದ ಭಕ್ತರು ತಮ್ಮ ಹೆಸರನ್ನು ಗೌಪ್ಯವಾಗಿಡಲು ಸೂಚಿಸಿದ್ದಾರೆ. ಈ ದೇವಸ್ಥಾನಕ್ಕೆ ಬರುವ ದೇಣಿಗೆಯಲ್ಲಿ ಶೇಕಡಾ 50 ರಷ್ಟು ಹಣ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.


ಇದನ್ನೂ ಓದಿ: ನೋಡಿ: ಮಣಭಾರದ ಟ್ರ್ಯಾಕ್ಟರ್‌ ಮೇಲಕ್ಕೆತ್ತಿ, ಮೈಮೇಲೂ ಹರಿಸಿ ಬೆರಗುಗೊಳಿಸಿದ ಕುಸ್ತಿಪಟು

ನವರಾತ್ರಿ ಹಬ್ಬದಂದು ಗಾಂಧಿನಗರದ ರುಪಾಲ್ ಗ್ರಾಮದಲ್ಲಿರುವ ವರದಾಯಿನಿ ಮಾತೆಯ ದೇವಸ್ಥಾನದಲ್ಲಿ ವಿಶೇಷವಾಗಿ ತುಪ್ಪದ ಪರಿಷೆಯನ್ನು ಆಯೋಜಿಸಲಾಗುತ್ತದೆ.

ABOUT THE AUTHOR

...view details