ಕರ್ನಾಟಕ

karnataka

ETV Bharat / bharat

ಗುಜರಾತ್‌ನಲ್ಲಿ ತಾಲಿಬಾನಿಗಳ ರೀತಿ ಮಹಿಳೆಯ ಮೇಲೆ ಕ್ರೌರ್ಯ! ವಿಡಿಯೋ - tribal woman was beaten

ವಿವಾದಿತ ಕುಟುಂಬಕ್ಕೆ ಸೇರಿದ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ಕುಟುಂಬದ ಸದಸ್ಯರು ತಾಲಿಬಾನಿಗಳು ಶಿಕ್ಷಿಸುವ ರೀತಿ ಮಹಿಳೆಯನ್ನು ಎಳೆದು ಥಳಿಸಿದ ಅಮಾನವೀಯ ಘಟನೆ ಗುಜರಾತ್ ದಾಹೋಡ್ ಜಿಲ್ಲೆಯ ಸಗಡಪದ ಗ್ರಾಮದಲ್ಲಿ ನಡೆದಿದೆ.

Tribal woman thrashed
ಮಹಿಳೆ ಮೇಲೆ ಹಲ್ಲೆ

By

Published : Aug 18, 2021, 12:43 PM IST

ಗುಜರಾತ್: ದಾಹೋಡ್ ಜಿಲ್ಲೆಯ ಸಗಡಪದ ಗ್ರಾಮದಲ್ಲಿ ಬುಡಕಟ್ಟು ಮಹಿಳೆ ಮೇಲೆ ಅತ್ಯಂತ ಅಮಾನವೀಯ ರೀತಿಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 16 ರಂದು ಬುಡಕಟ್ಟು ಮಹಿಳೆಯೊಬ್ಬರು ವಿವಾದಿತ ಕುಟುಂಬಕ್ಕೆ ಸೇರಿದ ಮಹಿಳೆಯೊಂದಿಗೆ ಮಾತನಾಡಿದ್ದಾರೆ ಎಂದು ಆರೋಪಿಸಿ ಆಕೆಯ ಕುಟುಂಬಸ್ಥರು ತಾಲಿಬಾನಿಗಳು ನೀಡುವ ಶಿಕ್ಷೆಯ ರೀತಿ ಘೋರವಾಗಿ ಥಳಿಸಿದ್ದರು. ಹೀಗೆ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಅಮಾನವೀಯತೆ!​

ವಿಡಿಯೋ ವೈರಲ್ ಆದ ಬಳಿಕ ಜಿಲ್ಲಾ ಪೊಲೀಸರು ಕ್ರಮ ಕೈಗೊಂಡು ಸಂತ್ರಸ್ತ ಮಹಿಳೆಯ ವಿಚಾರಣೆ ನಡೆಸಿದ್ದಾರೆ. ನಂತರ ಆಕೆ ಸುಖ್ಸರ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ಮುಂದುವರೆಸಿದ್ದಾರೆ.

ABOUT THE AUTHOR

...view details