ಚಂಡೀಗಢ/ಅಹಮದಾಬಾದ್: ದೇಶಾದ್ಯಂತ ಎರಡನೇ ಹಂತದ ಕೋವಿಡ್ ಅಲೆ ಕಡಿಮೆಯಾಗ್ತಿದ್ದು, ಇದರ ಬೆನ್ನಲ್ಲೇ ಎಲ್ಲವೂ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇದೀಗ ಕೆಲವೊಂದು ರಾಜ್ಯಗಳಲ್ಲಿ ಶಾಲಾ-ಕಾಲೇಜು ಪುನಾರಂಭ ಮಾಡಲು ನಿರ್ಧರಿಸಲಾಗುತ್ತಿದ್ದು, ಅಲ್ಲಿನ ಶಿಕ್ಷಣ ಇಲಾಖೆ ಸಕಲ ರೀತಿಯ ತಯಾರಿ ಮಾಡಿಕೊಳ್ಳುತ್ತಿವೆ.
ಇದೀಗ ಹರಿಯಾಣ ಸರ್ಕಾರ ಆಫ್‌ಲೈನ್ ತರಗತಿ ಆರಂಭ ಮಾಡಲು ಮುಂದಾಗಿದ್ದು, 9 ಹಾಗೂ 10ನೇ ತರಗತಿ ಜುಲೈ 16ರಿಂದ 6 ರಿಂದ 8ನೇ ತರಗತಿ ಕ್ಲಾಸ್ ಜುಲೈ 23ರಿಂದ ಆರಂಭ ಮಾಡಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 1ರಿಂದ 5ನೇ ತರಗತಿ ಆರಂಭ ಮಾಡುವ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.