ಗಾಂಧಿನಗರ: ಗುಜರಾತಿನ ಗಾಂಧಿನಗರದ ರುಪಾಲ್ ಗ್ರಾಮದಲ್ಲಿರುವ ದೇವಸ್ಥಾನವನ್ನು ಸ್ಥಳೀಯರು ಅಮೆರಿಕದ ಭಕ್ತರೊಬ್ಬರು ನೀಡಿದ ಅಮೆರಿಕನ್ ಡಾಲರ್‌ಗಳಿಂದ ಅಲಂಕರಿಸಿದ್ದು, ಇದು ಇದೀಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ವರದಾಯಿನಿ ಮಾತಾ ದೇವಸ್ಥಾನದಲ್ಲಿ ನವರಾತ್ರಿಯ 9ನೇ ದಿನದಂದು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಬುಧವಾರದ ವಿಶೇಷ ಪೂಜೆಗೆ ಅನಾಮಧೇಯ ಅಮೆರಿಕ ಮೂಲದ ಭಕ್ತರೊಬ್ಬರು ದೇವಸ್ಥಾನಕ್ಕೆ 1.12 ಲಕ್ಷ ರೂ.ಗೆ ಸಮಾನವಾದ $ 1500 ಕಳುಹಿಸಿದ್ದಾರೆ. ಈ ಡಾಲರ್‌ಗಳಿಂದ ದೇವಸ್ಥಾನದ ಟ್ರಸ್ಟಿಗಳು ಹಾಗೂ ಉಸ್ತುವಾರಿಗಳು ವರದಾಯಿನಿ ಮಾತಾಜಿಗೆ ಅಲಂಕಾರ ಮಾಡಿದ್ದಾರೆ.