ಗಾಂಧಿನಗರ(ಗುಜರಾತ್): ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಸರ್ಕಾರದ ನೂತನ ಸಚಿವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಗುಜರಾತ್ ಸಿಎಂಒ ಮಾಹಿತಿ ನೀಡಿದೆ.
ಭೂಪೇಂದ್ರ ಪಟೇಲ್ ಅವರ ಕ್ಯಾಬಿನೆಟ್ನಲ್ಲಿ ಹೊಸಬರಿಗೆ ಅವಕಾಶ ನೀಡಲಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಕಿರಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮೂಲಗಳ ಪ್ರಕಾರ ಪ್ರಸ್ತುತ ಇರುವವರನ್ನು ಕೈಬಿಡುವ ಸಾಧ್ಯತೆಯಿದೆ.
ಇನ್ನು ಸಚಿವರಾದ ದಿಲೀಪ್ ಠಾಕೋರ್ ಮತ್ತು ಕುನ್ವರ್ಜಿ ಬವಾಲಿಯಾ ಅವರ ಬೆಂಬಲಿಗರು ಬುಧವಾರ ಬೀದಿಗಿಳಿದು ತಮ್ಮನ್ನು ಹೊಸ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿದ್ದು, ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ. ರಾಜ್ಯ ಬಿಜೆಪಿ ಮುಖ್ಯಸ್ಥ ಸಿ.ಆರ್. ಪಾಟೀಲ್ ಅವರು ನಿನ್ನೆ ಗಾಂಧಿನಗರದಲ್ಲಿರುವ ಅವರ ನಿವಾಸದಲ್ಲಿ ಸಭೆಗಳನ್ನು ನಡೆಸಿದ್ದಾರೆ. ಶಾಸಕರು ಈಗಾಗಲೇ ಗಾಂಧಿನಗರಕ್ಕೆ ತಲುಪಿದ್ದಾರೆ.
ಇದನ್ನೂ ಓದಿ:ಇಂದು ವಿಸ್ತರಣೆಯಾಗುತ್ತಾ ಭೂಪೇಂದ್ರ ಪಟೇಲ್ ಸಚಿವ ಸಂಪುಟ?
ವಿಜಯ್ ರೂಪಾನಿ ಹಠಾತ್ ರಾಜೀನಾಮೆಯಿಂದ ತೆರವಾಗಿದ್ದ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಭೂಪೇಂದ್ರ ಪಟೇಲ್ ಸೆಪ್ಟೆಂಬರ್ 13ರಂದು ಪದಗ್ರಹಣ ಮಾಡಿದ್ದರು. ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 59 ವರ್ಷದ ಪಟೇಲ್ ರಾಜ್ಯದ 17ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ನಿನ್ನೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಇಂದು ಮಧ್ಯಾಹ್ನಕ್ಕೆ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಪ್ರಮಾಣವಚನ ಸ್ವೀಕರಿಸಲಿರುವವರು:
- ಗಣದೇವಿ ಶಾಸಕ ನರೇಶ್ ಪಟೇಲ್
- ಪಾರಡಿ ಶಾಸಕ ಕಾನು ದೇಸಾಯಿ
- ಮಜೂರ ಶಾಸಕ ಹರ್ಷ ಸಾಂಘ್ವಿ
- ಶಾಸಕ ಅರವಿಂದ ರಾಯನಿ
- ಲಿಂಬಡಿ ಶಾಸಕ ಕಿರಿಟ್ ಸಿಂಹ ರಾಣಾ
- ವಿಸ್ನಗರ್ ಶಾಸಕ ಹೃಷಿಕೇಶ್ ಪಟೇಲ್
- ಕಂಕ್ರೇಜ್ ಶಾಸಕ ಕೀರ್ತಿಸಿಂಹ ವಘೇಲಾ
- ಮೊರ್ಬಿ ಶಾಸಕ ಬೃಜೇಶ್ ಮೆರ್ಜಾ
- ಓಲ್ಪಾಡ್ ಶಾಸಕ ಮುಖೇಶ್ ಪಟೇಲ್
- ಕಪ್ರಡಾ ಶಾಸಕ ಜಿತುಭಾಯಿ ಚೌಧರಿ
- ಮೊರ್ಬಿ ಶಾಸಕ ಬ್ರಿಜೇಶ್ ಮೆರ್ಜಾ
- ಮಹುವಾ ಶಾಸಕ ಆರ್ ಸಿ ಮಕ್ವಾನ
- ಜಾಮ್‌ನಗರ ಗ್ರಾಮದ ರಾಘವಜಿ ಪಟೇಲ್
- ಭಾವನಗರ ಶಾಸಕ ಜಿತು ವಾಘನಿ
- ವಡೋದರಾ ನಗರ ಶಾಸಕಿ ಮನೀಷಾ ವಕೀಲ್
- ಕೇಶೋಡ್ ಶಾಸಕ ದೇವಾಭಾಯಿ ಮಾಲಂ
- ಧಾರಿ ಶಾಸಕ ಜೆವಿ ಕಾಕ್ಡಿಯಾ
- ನಿಕೋಲ್ ಶಾಸಕ ಜಗದೀಶ್ ಪಾಂಚಾಲ್
- ಪ್ರಾಂತಿಜ್ ಶಾಸಕ ಗಜೇಂದ್ರ ಸಿಂಹ ಪರ್ಮಾರ್