ವಲ್ಸಾದ್ (ಗುಜರಾತ್) : "ನನ್ನ ರೋಲ್ ಮಾಡೆಲ್ - ನಾಥುರಾಮ್ ಗೋಡ್ಸೆ" (My ideal Nathuram Godse) ಎಂಬ ವಿಷಯದ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಆಯೋಜಿಸಿದ್ದಕ್ಕಾಗಿ ಗುಜರಾತ್ ಸರ್ಕಾರವು ವಲ್ಸಾದ್ ಜಿಲ್ಲೆಯ ಯುವ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಿದೆ.
ಬುಧವಾರ ವಲ್ಸಾದ್ ಜಿಲ್ಲೆಯ ಸ್ಥಳೀಯ ಪತ್ರಿಕೆಗಳು "ನನ್ನ ರೋಲ್ ಮಾಡೆಲ್ - ನಾಥುರಾಮ್ ಗೋಡ್ಸೆ" ಎಂಬ ವಿಷಯದ ಕುರಿತು ವಿದ್ಯಾರ್ಥಿನಿಯೊಬ್ಬಳು ಭಾಷಣ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ ಎಂದು ವರದಿಗಳನ್ನು ಪ್ರಕಟಿಸಿದ ನಂತರ ಈ ವಿಷಯವು ಮುನ್ನೆಲೆಗೆ ಬಂದಿದೆ. ಹಿಗಾಗಿ ಈ ಪ್ರಕರಣ ಸಂಬಂಧ ಗುಜರಾತ್ ಸರ್ಕಾರದ ಯುವಜನ ಸೇವೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಇಲಾಖೆಯು ವಿಚಾರಣೆ ಪ್ರಾರಂಭಿಸಿರುವುದಾಗಿ ತಿಳಿಸಿದೆ.