ಕರ್ನಾಟಕ

karnataka

ETV Bharat / bharat

ಮ್ಯೂಕೋರ್​ಮೈಕೋಸಿಸ್​ನ ನಕಲಿ ಔಷಧಿ ಮಾರಾಟ: ಬೃಹತ್ ಹಗರಣ ಬಯಲಿಗೆಳೆದ FDCA - ಪೋಸ್ಕೊನಜೋಲ್

ದೇಶಾದ್ಯಂತ ತಲ್ಲಣ ಮೂಡಿಸಿರುವ ಶಿಲೀಂಧ್ರ ಸೋಂಕಿಗೆ ಔಷಧಿಗಳ ಬೇಡಿಕೆ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಿಡಿಗೇಡಿಗಳು ನಕಲಿ ಔಷಧಿ ಮಾರಾಟಕ್ಕೆ ಮುಂದಾಗಿದ್ದು, FDCA ಅವರನ್ನು ಪತ್ತೆ ಹಚ್ಚಿದೆ.

Mucormycosis
Mucormycosis

By

Published : Jul 8, 2021, 7:31 AM IST

ಅಹಮದಾಬಾದ್: ಮ್ಯೂಕೋರ್​ಮೈಕೋಸಿಸ್​ಗೆ ನೀಡಲಾಗುವ ನಕಲಿ ಔಷಧಿ ಮಾರುತ್ತಿದ್ದ ಮಳಿಗೆಗಳ ಮೇಲೆ ದಾಳಿ ನಡೆಸಿ 50 ಲಕ್ಷ ರೂಪಾಯಿ ಮೌಲ್ಯದ ಮೆಡಿಸಿನ್​ಗಳನ್ನು ವಶಪಡಿಸಿಕೊಂಡಿರುವುದಾಗಿ ಗುಜರಾತ್​ನ ಫುಡ್​​ ಆ್ಯಂಡ್​ ಡ್ರಗ್ಸ್​ ಕಂಟ್ರೋಲ್​ ಅಡ್ಮಿನಿಸ್ಟ್ರೇಷನ್ ​(ಎಫ್‌ಡಿಸಿಎ) ತಿಳಿಸಿದೆ.

ತೆಲಂಗಾಣ ಮೂಲದ ಅಸ್ಟ್ರಾ ಜೆನೆರಿಕ್ಸ್​ ಪ್ರೈವೇಟ್​ ಲಿಮಿಟೆಡ್, ಮ್ಯೂಕೋರ್ಮೈಕೋಸಿಸ್​ಗೆ ಪೋಸ್ಕೊನಜೋಲ್​ ಟ್ಯಾಬ್ಲೆಟ್​ ಹಾಗೂ ಸಿರಪ್ ತಯಾರಿಕೆಯಲ್ಲಿ ತೊಡಗಿಕೊಂಡಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಯಾರಿಸಿದ ಔಷಧಿಯನ್ನು ಹೈದರಾಬಾದ್ ಮೂಲದ ಮಾರ್ಕೆಟಿಂಗ್ ಸಂಸ್ಥೆ ಆಸ್ಪೆನ್ ಬಯೋಫಾರ್ಮ್ ಸಹಾಯದಿಂದ ದೇಶಾದ್ಯಂತ ಮಾರಾಟ ಮಾಡಿದೆ ಎಂದು ಎಫ್​ಡಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಮ್ಯೂಕೋರ್​ಮೈಕೋಸಿಸ್​​ಗೆ ಚಿಕಿತ್ಸೆ ನೀಡಲು ಪೋಸ್ಕೊನಜೋಲ್ ಔಷಧಿ ಅಗತ್ಯವಾಗಿದ್ದು, ಹೆಚ್ಚಿನ ಬೇಡಿಕೆಯಿದೆ. ಇದರ ಲಾಭ ಪಡೆದ ಅಸ್ಟ್ರಾ ಜೆನೆರಿಕ್ಸ್, ಯಾವುದೇ ಪರವಾನಗಿ ಇಲ್ಲದೆ, ಕುವಿಕಾನ್ ಎಂಬ ಬ್ರಾಂಡ್ ಹೆಸರಿನಲ್ಲಿ ಔಷಧಿ ತಯಾರಿಸಲು ಪ್ರಾರಂಭಿಸಿತು. ಅಲ್ಲದೆ ಈ ಔಷಧಿಯನ್ನು ಆಸ್ಪೆನ್ ಬಯೋಫಾರ್ಮ್ ಸಹಾಯದಿಂದ ದೇಶಾದ್ಯಂತ ಮಾರಾಟ ಮಾಡಿದೆ ಎಂದು ಎಫ್​ಡಿಸಿಎ ಆಯುಕ್ತ ಹೆಚ್.ಜಿ.ಕೊಶಿಯಾ ಹೇಳಿದ್ದಾರೆ.

ದೇಶಾದ್ಯಂತ ಮಾರಾಟವಾದ ಅಸ್ಟ್ರಾ ಜೆನೆರಿಕ್ಸ್‌ನ ಕುವಿಕಾನ್ ನಕಲಿ ಔಷಧಿ ಎಂದು ಪತ್ತೆ ಮಾಡಿದ ಮೊದಲ ರಾಜ್ಯ ಗುಜರಾತ್. ಇತ್ತೀಚೆಗೆ ರಾಜ್ಯದಲ್ಲಿ ಈ ನಕಲಿ ಔಷಧಿ ಮಾರಾಟ ಮಾಡುವುದರ ಖಚಿತ ಮಾಹಿತಿ ಬಂದ ಹಿನ್ನೆಲೆ ಎಫ್​ಡಿಸಿಎ ತಂಡಗಳು ದಾಳಿ ನಡೆಸಿ, ಲಕ್ಷಾಂತರ ರೂ.ಮೌಲ್ಯದ ಮೆಡಿಸಿನ್​ಗಳನ್ನು ವಶಪಡಿಸಿಕೊಂಡಿವೆ.

ಜುಲೈ 6 ರಂದು ಜಪ್ತಿ ಮಾಡಿದ್ದ ಔಷಧಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅದು ನಕಲಿ ಔಷಧಿ ಎಂದು ದೃಢಪಟ್ಟಿದೆ. ದಾಳಿ ವೇಳೆ ನಾವು 1,440 ಮಾತ್ರೆಗಳು, 50.18 ಲಕ್ಷ ರೂ.ಮೌಲ್ಯದ 182 ಬಾಟಲ್ ಸಿರಪ್ ಅನ್ನು ವಶಪಡಿಸಿಕೊಂಡಿದ್ದೇವೆ. ಒಂದು ಟ್ಯಾಬ್ಲೆಟ್ ಬೆಲೆ 1,000 ರೂ., ಒಂದು ಸಿರಪ್ ಬಾಟಲ್ ಬೆಲೆ 20,500 ರೂಪಾಯಿ ಎಂದು ಕೊಶಿಯಾ ಹೇಳಿದ್ದಾರೆ.

ಇದನ್ನೂ ಓದಿ:ಎಲ್ಲಾ ದೇಶಗಳಲ್ಲೂ ಲಭ್ಯವಾಗಲಿದೆ 'ಕೋವಿನ್ ಪ್ಲಾಟ್ ಫಾರಂ': ಪ್ರಧಾನಿ ಮೋದಿ

ಗುಜರಾತ್​ನ ಹಲವಾರು ಮೆಡಿಕಲ್​ ಸ್ಟೋರ್​ಗಳಲ್ಲಿ ಈ ಔಷಧಿ ಮಾರಾಟವಾಗಿದೆ. ಹಾಗಾಗಿ ಎಫ್‌ಡಿಸಿಎ ಇತರೆ ರಾಜ್ಯಗಳಿಗೆ ಈ ಬಗ್ಗೆ ಅಗತ್ಯ ಸಲಹೆ ನೀಡುವಂತೆ ಭಾರತದ ಡ್ರಗ್ ಕಂಟ್ರೋಲರ್ ಜನರಲ್​ಗೆ ಮನವಿ ಮಾಡಿದೆ. ಈಗಾಗಲೇ ತನಿಖೆ ಶುರುವಾಗಿದ್ದು, ಆರೋಪಿಗಳ ವಿರುದ್ಧ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಕೊಶಿಯಾ ತಿಳಿಸಿದ್ದಾರೆ.

ABOUT THE AUTHOR

...view details