ಗಾಂಧಿನಗರ(ಗುಜರಾತ್):ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳಾದ ದಿನೇಶ್ಚಮದ್ರಾ ಜೆಮಾಲ್ಭಾಯ್ ಅನನ್ವಾಡಿಯಾ ಮತ್ತು ರಂಭಾಯ್ ಹರ್ಜಿಭಾಯ್ ಮೊಕರಿಯಾ ಗುಜರಾತ್ ರಾಜ್ಯಸಭೆ ಉಪ ಚುನಾವಣೆಯಲ್ಲಿ ಗೆಲುವು ದಾಖಲು ಮಾಡಿದ್ದಾರೆ.
ಕಾಂಗ್ರೆಸ್ ಸಂಸದ ಅಹ್ಮದ್ ಪಟೇಲ್ ಮತ್ತು ಬಿಜೆಪಿ ಸಂಸದ ಅಭಯ್ ಗಣಪಟ್ರೇ ಭಾರದ್ವಾಜ್ ಅವರ ನಿಧನ ನಂತರ ಈ ಸ್ಥಾನ ಖಾಲಿಯಾಗಿದ್ದವು.
ಓದಿ: ಭವಿಷ್ಯದಲ್ಲಿ ಏನ್ ಆಗ್ತೀರಾ ಮಕ್ಕಳೇ? ತೊಡೆ ಮೇಲೆ ಮಕ್ಕಳಿಬ್ಬರನ್ನ ಕುಳ್ಳರಿಸಿಕೊಂಡು ರಾಗಾ ಮಾತು!
ಉಪ ಚುನಾವಣೆಗಾಗಿ ಕಳೆದ ಗುರುವಾರ ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿತ್ತು. ಆದರೆ ಕಾಂಗ್ರೆಸ್ನ ಯಾವುದೇ ಅಭ್ಯರ್ಥಿ ಕಣಕ್ಕಿಳಿದಿರಲಿಲ್ಲ. ಬಿಜೆಪಿಯ ಇಬ್ಬರು ನಾಮನಿರ್ದೇಶಿತರು ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆ ಇತ್ತು. ಅದೇ ರೀತಿ ಇಬ್ಬರು ಆಯ್ಕೆಯಾಗಿದ್ದಾರೆ. ಗುಜರಾತ್ನ 182 ವಿಧಾನಸಭೆಯಲ್ಲಿ 65 ಕಾಂಗ್ರೆಸ್ ಶಾಸಕರು ಹಾಗೂ 111 ಬಿಜೆಪಿ ಶಾಸಕರಿದ್ದಾರೆ. ಹೀಗಾಗಿ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನ ಕಣಕ್ಕಿಳಿಸಿರಲಿಲ್ಲ.