ರಾಜಕೋಟ್(ಗುಜರಾತ್):ರಾಜ್‌ಕೋಟ್‌ನ ರೇಸ್ ಕೋರ್ಸ್ ಸಮೀಪ ಇರುವ ಶಾಸ್ತ್ರಿ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಮಯೂರ್ ನಟವರ್ ಭಾಯ್ ಮಕ್ವಾನಾ(43) ಎಂಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದವರು. ಭಾನುವಾರ ರಜೆ ಇರುವುದರಿಂದ ಬೆಳಗ್ಗೆ ತಮ್ಮ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ.
ಕ್ರಿಕೆಟ್ ಆಡುತ್ತಿದ್ದ ವೇಳೆ ಮಯೂರ್ ಮಕ್ವಾನಾ ಒಮ್ಮೆ ಕುಸಿದು ನೆಲಕ್ಕೆ ಬಿದ್ದರು. ತಕ್ಷ ಸ್ನೇಹಿತರು ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಯೂರ್ ಮಕ್ವಾನಾ ಅವರ ಪ್ರಾಣ ಹಾರಿಹೋಗಿತ್ತು. ಮಯೂರ್ ಮಕ್ವಾನಾ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.
ಮಯೂರ್ ಮಕ್ವಾನಾ ಹೃದಯಘಾತದಿಂದ ಮೈದಾನದಲ್ಲಿ ಕುಸಿದು ಬಿದ್ದಿರುವ ಸುದ್ದಿ ಕೇಳಿ, ಮಯೂರ್ ಅವರ ಸಂಬಂಧಿಕರು ಆಸ್ಪತ್ರೆಗೆ ದೌಡಾಯಿಸಿದ್ದರು. ಮಯೂರ್ ಮೃತಪಟ್ಟಿರುವ ಸುದ್ದಿ ಕೇಳಿ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತು. ಮೃತ ಮಯೂರ್ ಮಾವ ಶಾಂತಿಭಾಯಿ ಪರ್ಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಮಕ್ವಾನ್ ಅವರು ಭಾನುವಾರ ರಜೆ ಇದ್ದಿದ್ದರಿಂದ ಶಾಸ್ತ್ರಿ ಮೈದಾನಕ್ಕೆ ಸ್ನೇಹಿತರ ಜತೆಗೆ ಕ್ರಿಕೆಟ್ ಆಡಲು ತೆರಳಿದ್ದರು. ಕ್ರಿಕೆಟ್ ಆಡುವಾಗ ಕುಸಿದು ಬಿದ್ದಿದ್ದರು. ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಸ್ನೇಹಿತರು ತಕ್ಷಣ ಆತನನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಮಯೂರ್ ಮೃತಪಟ್ಟಿದ್ದನು.
ಮೃತ ಮಯೂರ್ನಿಗೆ ಯಾವುದೇ ಕಾಯಿಲೆ, ದುಶ್ಚಟ ಇರಲಿಲ್ಲ. ಕಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಪ್ರತಿ ಭಾನುವಾರ ಕ್ರಿಕೆಟ್ ಆಡಲು ಹೋಗುತ್ತಿದ್ದರು. ಭಾನುವಾರ ಕ್ರಿಕೆಟ್ ಆಡುತ್ತಿದ್ದಾಗ ಸ್ವಲ್ಪ ಆರಂಭದಲ್ಲಿ ಬಳಲಿದಂತೆ ಕಂಡುಬಂದಿದ್ದರು. ಕೂಡಲೇ ಎದೆನೋವು ಕಾಣಿಸಿಕೊಂಡಿದೆ. ಅಲ್ಲಿಂದ ಇದ್ದಕಿದ್ದಂತೆ ಕುಸಿದು ಬಿದ್ದಿದ್ದಾರೆ. ನಂತರ ಅವರ ಸ್ನೇಹಿತರು 108ಗೆ ಮಾಹಿತಿ ನೀಡಿ, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮೃತಪಟ್ಟ ಮಯೂರ್ ನಟವರ್ ಭಾಯ್ ಮಕ್ವಾನಾ ಅವರಿಗೆ ಪತ್ನಿ, ಮಗ, ಮಗಳು ಇದ್ದಾರೆ.