ದೇವಭೂಮಿ ದ್ವಾರಕಾ: ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯು ಮೂರು ದಿನಗಳ 'ಚಿಂತನ ಶಿಬಿರ'ವನ್ನು ದ್ವಾರಕಾದಲ್ಲಿ ಆಯೋಜಿಸಿದ್ದು, ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗುಜರಾತ್ಗೆ ಆಗಮಿಸುತ್ತಿದ್ದಾರೆ.
ರಾಜ್ಯಕ್ಕೆ ಭೇಟಿ ನೀಡಿದ ನಂತರ ಬೆಳಗ್ಗೆ 11:30 ಕ್ಕೆ ದ್ವಾರಕಾಧೀಶ ದೇವರಿಗೆ ಪೂಜೆ ಸಲ್ಲಿಸಿ, ಮಧ್ಯಾಹ್ನ 1ರಿಂದ 4ರವರೆಗೆ ಚಿಂತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ.27ರಂದು ಚಿಂತನ ಶಿಬಿರ ಮುಕ್ತಾಯವಾಗಲಿದ್ದು, ಏರಡನೇ ದಿನವಾದ ಇಂದು ಜನರ ನ್ಯಾಯ ಮತ್ತು ಹಕ್ಕುಗಳ ಹೋರಾಟದ ಕುರಿತಾದ ಪ್ರಣಾಳಿಕೆ ಮಂಡಿಸಲಾಗುವುದು.
ಕಾಂಗ್ರೆಸ್ ಚಿಂತನ ಶಿಬಿರ ಕಾರ್ಯಕ್ರಮ ಫೆಬ್ರವರಿ 25 ರಿಂದ ದ್ವಾರಕಾದಲ್ಲಿ ಪ್ರಾರಂಭವಾದ ರಾಜ್ಯ ಕಾಂಗ್ರೆಸ್ ಚಿಂತನ ಶಿಬಿರ, ರಾಜ್ಯ ಉಸ್ತುವಾರಿ ಸಚಿವ ರಘು ಶರ್ಮಾ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಗದೀಶ್ ಠಾಕೂರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸುಖರಾಮ್ ರಥ್ವಾ ನೇತೃತ್ವದಲ್ಲಿ ನಡೆಯುತ್ತಿದ್ದು, ಇಂದು ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಉಪಸ್ಥಿತರಿರುವರು.
ಕಾಂಗ್ರೆಸ್ ಚಿಂತನ ಶಿಬಿರ ಕಾರ್ಯಕ್ರಮ ಇದನ್ನೂ ಓದಿ:ಉಕ್ರೇನ್ನ ಚೆರ್ನೊಬಿಲ್ ಬಳಿ ವಿಕಿರಣ ಹೊರಸೂಸುವಿಕೆ ಹೆಚ್ಚಳ: ವರದಿ
ಮುಂಬರುವ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್, ಮುಂದಿನ ಚುನಾವಣೆಯಲ್ಲಿ 125 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ರಾಜ್ಯ ಕಾಂಗ್ರೆಸ್ ಘಟಕವು ಪ್ರಯತ್ನ ನಡೆಸುತ್ತಿದೆ. 2017ರಲ್ಲಿ ಒಟ್ಟು 182 ಸ್ಥಾನಗಳಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದಿತ್ತು ಎಂದರು.