ಕರ್ನಾಟಕ

karnataka

ETV Bharat / bharat

ಸೇನಾ ಕಂಟೋನ್ಮೆಂಟ್​​ನಲ್ಲೇ ಆತ್ಮಹತ್ಯೆಗೆ ಶರಣಾದ ಯೋಧ.. ಕಾರಣ ನಿಗೂಢ! - ಅಹಮದಾಬಾದ್​​ನಲ್ಲಿ ಯೋಧ ಆತ್ಮಹತ್ಯೆಗೆ ಶರಣು

ಪ್ರಾಥಮಿಕ ಮಾಹಿತಿ ಪ್ರಕಾರ ಗುರ್ಜಯ್​ ಪಾಲ್​ ಸಿಂಗ್​, ಶಾಹಿಬಾಗ್​ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಕಂಟೋನ್ಮೆಂಟ್​​ಗೆ ವಾಪಸ್​​ ಆಗಿದ್ದರು. ಈ ವೇಳೆ ರೈಫಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ..

Punjabi soldier commits suicide in Army cantonment
Punjabi soldier commits suicide in Army cantonment

By

Published : Jan 29, 2022, 4:36 PM IST

ಅಹಮದಾಬಾದ್​(ಗುಜರಾತ್​) :ಪಂಜಾಬ್​​ನ ಸೈನಿಕನೋರ್ವ ಶಾಹಿಬಾಗ್​ ಸೇನಾ ಕಂಟೋನ್ಮೆಂಟ್​​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಈ ಪ್ರಕರಣ ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಅಹಮದಾಬಾದ್​​ನ ಶಾಹಿಬಾಗ್​​ನಲ್ಲಿರುವ ಸೇನಾ ಕಂಟೋನ್ಮೆಂಟ್​ನಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಗುರ್ಜಯ್​ಪಾಲ್​​ ಸಿಂಗ್​​​ ತನ್ನ ರೈಫಲ್‌ನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

ಇದನ್ನೂ ಓದಿರಿ:ಅಮೃತಸರ್​ ಪೂರ್ವ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ನವಜೋತ್​​ ಸಿಂಗ್​ ಸಿಧು

ಪ್ರಾಥಮಿಕ ಮಾಹಿತಿ ಪ್ರಕಾರ ಗುರ್ಜಯ್​ ಪಾಲ್​ ಸಿಂಗ್​, ಶಾಹಿಬಾಗ್​ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಕಂಟೋನ್ಮೆಂಟ್​​ಗೆ ವಾಪಸ್​​ ಆಗಿದ್ದರು. ಈ ವೇಳೆ ರೈಫಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈತನ ಆತ್ಮಹತ್ಯೆಗೆ ಏನು ಕಾರಣ ಎಂಬುದು ಈವರೆಗೆ ತಿಳಿದು ಬಂದಿಲ್ಲ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈಗಾಗಲೇ ತನಿಖೆ ಆರಂಭ ಮಾಡಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details