ಅಹಮದಾಬಾದ್ (ಗುಜರಾತ್):ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ನ ರಾಣಿಪ್ ನಿಶಾನ್ ಪಬ್ಲಿಕ್ ಸ್ಕೂಲ್‌ನಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾದ ಬಳಿಕ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಮತಗಟ್ಟೆಗೆ ಬಂದ ಪ್ರಧಾನಿ ಜನರ ಜೊತೆಗೆ ಸರತಿಯಲ್ಲಿ ನಿಂತು ವೋಟ್ ಹಾಕಿದರು.
ಬಳಿಕ ತಾವು ಮತ ನೀಡಿದ ಶಾಯಿ ಗುರುತಿನ ಬೆರಳು ತೋರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಮತದಾನ ಮಾಡುವಂತೆ ಸಲಹೆ ಕರೆ ನೀಡಿದರು. ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಇದಕ್ಕೂ ಮೊದಲು ಪ್ರಧಾನಿ ಮೋದಿ, ಅಹಮದಾಬಾದ್ನ ನಿಶಾನ್ ಪಬ್ಲಿಕ್ ಶಾಲೆಯಲ್ಲಿ ಮತದಾನ ಮಾಡುವೆ. ಎಲ್ಲರೂ ಬಂದು ಮತ ನೀಡಿ ಎಂದು ಟ್ವೀಟ್ ಮಾಡಿದ್ದರು.
ಸರತಿ ಸಾಲಿನಲ್ಲಿ ನಿಂತು ಪ್ರಧಾನಿ ಮೋದಿ ಮತದಾನ ಎರಡನೇ ಹಂತದಲ್ಲಿ 14 ಜಿಲ್ಲೆಗಳ 93 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 61 ಪಕ್ಷಗಳ 833 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಭವಿಷ್ಯವನ್ನು 2.51 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ಇದಕ್ಕಾಗಿ ಚುನಾವಣಾ ಆಯೋಗವು 26,409 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಸುಮಾರು 36,000 ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಿಕೊಳ್ಳಲಾಗಿದೆ.
ಸಿಎಂ ಭೂಪೇಂದ್ರ ಪಟೇಲ್ ಮತದಾನ ಸಿಎಂ ಭೂಪೇಂದ್ರ ಪಟೇಲ್ ಮತದಾನ:ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಚುನಾವಣೆಯ ಎರಡನೇ ಹಂತದಲ್ಲಿ 95 ನೇ ಬೂತ್ನ ಶಿಲಾಜ್ ಅನುಪಮ್ ಶಾಲೆಯಲ್ಲಿ ಮತ ಚಲಾಯಿಸಿದರು.
ಕುಟುಂಬದ ಜತೆಗೂಡಿ ಅಮಿತ್ ಶಾ ವೋಟ್:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಕುಟುಂಬಸ್ಥರ ಜೊತೆಗೂಡಿ ನಾರನ್ಪುರದಲ್ಲಿರುವ ಎಎಂಸಿ ಉಪ ವಲಯ ಕಚೇರಿಯಲ್ಲಿ ಮತ ಚಲಾಯಿಸಿದರು. ಪುತ್ರ ಮತ್ತು ಬಿಸಿಸಿಐ ಕಾರ್ಯದರ್ಶಿಯಾದ ಜಯ್ ಶಾ ಸೇರಿದಂತೆ ಕುಟುಂಬದ ಸದಸ್ಯರೂ ಮತದಾನ ಮಾಡಿದರು.
ಓದಿ:ಗುಜರಾತ್ ವಿಧಾನಸಭೆ ಚುನಾವಣೆ: 93 ಕ್ಷೇತ್ರಗಳಿಗೆ 2ನೇ ಹಂತದ ಮತದಾನ